Friday, October 2, 2026

BDA Apartments

Home Front Page ನನಗೆ ಪ್ರಧಾನಿ ಆಗೋ ಆಸೆ ಇದೆ, ಆದ್ರೆ ಆಗಬೇಕಲ್ಲ? ಶಾಸಕ ಬಸವರಾಜ ರಾಯರೆಡ್ಡಿ ವ್ಯಂಗ್ಯ

ನನಗೆ ಪ್ರಧಾನಿ ಆಗೋ ಆಸೆ ಇದೆ, ಆದ್ರೆ ಆಗಬೇಕಲ್ಲ? ಶಾಸಕ ಬಸವರಾಜ ರಾಯರೆಡ್ಡಿ ವ್ಯಂಗ್ಯ

ಕೊಪ್ಪಳ,ಜುಲೈ3,2026 (www.justkannada.in):  ಡಿಕೆ ಶಿವಕುಮಾರ್ ರಾಜ್ಯದ ಸಿಎಂ ಆಗಿ ಒಂದು ತಿಂಗಳು ಕಳೆದರೂ ಪೂರ್ಣ ಪ್ರಮಾಣದ ಸಚಿವ ಸಂಪುಟ ಇನ್ನೂ ರಚನೆಯಾಗಿಲ್ಲ.  ಸಚಿವ ಸಂಪುಟ ವಿಸ್ತರಣೆ ವೇಳೆ ತಮಗೆ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಶಾಸಕರು ಕಾತರದಿಂದ ಕಾದುಕುಳಿತಿದ್ದಾರೆ. ಈ ಮಧ್ಯೆ ತಮಗೆ ಸಚಿವ ಸ್ಥಾನ ಸಿಗುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ  ಶಾಸಕ ಬಸವರಾಜ ರಾಯರೆಡ್ಡಿ ಅವರು ವ್ಯಂಗ್ಯವಾಗಿ ಉತ್ತರಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಶಾಸಕ ಬಸವರಾಜ ರಾಯರೆಡ್ಡಿ, ಸಂಪುಟ ವಿಸ್ತರಣೆ ಬಗ್ಗೆ ಗೊತ್ತಿಲ್ಲ. ವರಿಷ್ಠರ ಒಪ್ಪಿಗೆ ಪಡೆದು ಸಿಎಂ ಸಂಪುಟ ವಿಸ್ತರಣೆ ಮಾಡಬೇಕು ಎಂದರು.ನನಗೆ ಪ್ರಧಾನಿ ಆಗೋ ಆಸೆ ಇದೆ, ಆದ್ರೆ ಆಗಬೇಕಲ್ಲ? ಶಾಸಕ ಬಸವರಾಜ ರಾಯರೆಡ್ಡಿ ವ್ಯ...

ನನಗೆ ಪ್ರಧಾನಿ ಆಗೊ ಆಸೆ ಇದೆ. ಆದರೆ ಆಗಬೇಕಲ್ಲಾ? ಈಗ ಸಚಿವ ಸ್ಥಾನವನ್ನು ಕೊಟ್ಟರೇ ಯಾರು ಬೇಡ ಅಂತಾರೆ.  ನನಗೆ ಮಂತ್ರಿಸ್ಥಾನ ಕೊಟ್ಟರೇ  ಸ್ವೀಕರಿಸುತ್ತೇನೆ. ನಾನಾಗಿಯೇ ಕೇಳಲ್ಲ. ನಾವು ಪಕ್ಷ ನಿಷ್ಠರು. ಎಂದು ಬಸವರಾಜ ರಾಯರೆಡ್ಡಿ ತಿಳಿಸಿದರು.ನನಗೆ ಪ್ರಧಾನಿ ಆಗೋ ಆಸೆ ಇದೆ jk02_new jk02 new

Key words:  Cabinet, expansion, MLA, Basavaraja Rayareddy