Monday, September 14, 2026

BDA Apartments

Home Front Page ಸಿಎಎ ಜಾರಿ ಮಾಡಿರುವುದು ಬಿಜೆಪಿಯ ಹಿಡನ್ ಅಜೆಂಡಾ-ಸಿಎಂ ಸಿದ್ದರಾಮಯ್ಯ ವಾಗ್ದಾಳಿ.

ಸಿಎಎ ಜಾರಿ ಮಾಡಿರುವುದು ಬಿಜೆಪಿಯ ಹಿಡನ್ ಅಜೆಂಡಾ-ಸಿಎಂ ಸಿದ್ದರಾಮಯ್ಯ ವಾಗ್ದಾಳಿ.

ಚಾಮರಾಜನಗರ,ಮಾರ್ಚ್,12,2024(www.justkannada.in): ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿರುವುದು ಬಿಜೆಪಿ ಸರ್ಕಾರದ ಹಿಡನ್ ಅಜೆಂಡಾ ಎಂದು  ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಸಂವಿಧಾನ ಬದಲಾವಣೆ ಬಗ್ಗೆ ಅನಂತ್ ಕುಮರ್ ಹೆಗಡೆಯಿಂದ ಹೇಳಿಸ್ತಾರೆ. ಹೆಗಡೆ ಆರ್ಡಿನರಿ ಫೆಲೋ ಅಲ್ಲ ಐದು ಸಾರಿ ಸಂಸದನಾದವರು. ಪಕ್ಷದ ತೀರ್ಮಾನ ಆಗದೇ ಈ ರೀತಿ ಹೇಳಲು ಸಾಧ್ಯವುದೆಯೇ..?   ಬಹುಮತ ಕೊಟ್ರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದಿದ್ದಾನೆ. ಇದು ಬಿಜೆಪಿಯ ಹಿಡನ್ ಅಜೆಂಡಾ. ಚುನಾವಣೆಗೋಸ್ಕರ ಸಿಎಎ ಜಾರಿ ಆಢಿದ್ದಾರೆ. ಧರ್ಮದ ಆಧಾರದ ಮೇಲೆ ಪೌರತ್ವ ನೀಡಲು ನನ್ನ ವಿರೋಧವಿದೆ ಎಂದು ಹೇಳಿದರು.ಸಿಎಎ ಜಾರಿ ಮಾಡಿರುವುದು ಬಿಜೆಪಿಯ ಹಿಡನ್ ಅಜೆಂಡಾ siddaramaiah123

ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡಲಾಗುತ್ತಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ,  ತಮಿಳುನಾಡಿಗೆ ನೀರು ಬಿಡುತ್ತಿದ್ದೇವೆ ಎಂಬದು ಸುಳ್ಳು. ನಾವು ಒಂದು ಹನಿ ನೀರು ಬಿಡಲ್ಲ. ಕುಡಿಯವುದಕ್ಕೆ ನೀರು ಇಟ್ಟುಕೊಳ್ಳದೇ ನೀರು ಬಿಡಲು ಆಗುತ್ತಾ…?  ಕೇಂದ್ರದವರು ತಮಿಳುನಾಡಿನವರು ಕೇಳಿದರೂ ನೀರು ಕೊಡಲ್ಲ ಎಂದು ತಿಳಿಸಿದರು.

Key words:  implementation -CAA – BJP- hidden agenda- CM -Siddaramaiah