ಉಡುಪಿ,ಆಗಸ್ಟ್,2,2023(www.justkannada.in): ಉಡುಪಿ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ದೂರು ನೀಡ್ತೇವೆ ಎಂದು ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ, ಪ್ರಕರಣಕ್ಕೆ ಸಂಬಂಧಿಸಿದಂತೆ ‘ಆಗಸ್ಟ್ 4ರ ಮಧ್ಯಾಹ್ನ 12.30ಕ್ಕೆ ರಾಜ್ಯಪಾಲರ ಭೇಟಿ ಮಾಡಿ, ಎಸ್ಐಟಿ ತನಿಖೆಗೆ ಒತ್ತಾಯಿಸಿ ದೂರು ನೀಡುತ್ತೇವೆ. ಪೊಲೀಸರಿಗೆ ತನಿಖೆ ನಡೆಸಲು ಸರಕಾರ ಫ್ರೀ ಹ್ಯಾಂಡ್ ಬಿಟ್ಟಿಲ್ಲ. ಆರೋಪಿಗಳಿಗೆ ಬೇಲ್ ಸಿಗುವ ಸೆಕ್ಷನ್ ಹಾಕಲಾಗಿದೆ. ಬೆಳ್ಳಿಯಪ್ಪನವರ ಮೇಲೆ ವಿಶ್ವಾಸ ಇದೆ ನ್ಯಾಯ ಕೊಡುತ್ತಾರೆ ಎಂದು ತಿಳಿಸಿದರು.
Key words: Udupi -College -video –case-complain – Governor-BJP MLA.