ಮೂರು ಕಾರುಗಳ ಕಳವು ಪ್ರಕರಣ ಭೇದಿಸಿದ ಮೈಸೂರು ನಗರ ಪೊಲೀಸರು.

ಮೈಸೂರು,ಆಗಸ್ಟ್,2,2023(www.justkannada.in): ನಗರದಲ್ಲಿ ಮೂರು ಕಾರು ಕಳವು ಪ್ರಕರಣವನ್ನ ಭೇದಿಸಿರುವ ಮೈಸೂರು ನಗರ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ವಿ.ವಿ ಪುರಂ, ಹೆಬ್ಬಾಳ್, ವಿಜಯನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಕಾರುಗಳು ಕಳ್ಳತನವಾಗಿತ್ತು. ಇನೋವಾ, ಫಾರ್ಚೂನರ್, ಮಹೇಂದ್ರ xuv 700 ಕಾರುಗಳನ್ನ ದುಷ್ಕರ್ಮಿಗಳು ಕದೊಯ್ದಿದ್ದರು.

ಈ ನಡುವೆ ಇಂದು ಸುದ್ಧಿಗೋಷ್ಠಿ ನಡೆಸಿ ಪ್ರಕರಣ ಭೇದಿಸಿದ ವಿಚಾರ  ಕುರಿತು ಮಾಹಿತಿ ನೀಡಿದ ನಗರ ಪೋಲಿಸ್ ಆಯುಕ್ತ ರಮೇಶ್ ಬಾನೋತ್, ವಿ.ವಿ ಪುರಂ ನ ಯಾದವಗಿರಿಯಲ್ಲಿ ಕಾರು ಮತ್ತು ಚಿನ್ನಾಭರಣ ಕಳುವಾಗಿದ್ದ ಪ್ರಕರಣದಲ್ಲಿ ಆಂಧ್ರಪ್ರದೇಶ ಮೂಲದ ವ್ಯಕ್ತಿಯನ್ನ ಬಂಧಿಸಲಾಗಿದೆ.  ಬಂಧಿತನಿಂಧ ಒಂದು ಕಾರು ಮತ್ತು 750 ಗ್ರಾಂ ಚಿನ್ನಾಭರಣ ಸೇರಿದಂತೆ ಸುಮಾರು 1.19 ಕೋಟಿ ಬೆಲೆ ಬಾಳುವ ವಸ್ತುಗಳನ್ನ ವಶ ಪಡೆಯಲಾಗಿದೆ.  ಆರೋಪಿಯ ಮೇಲೆ ಆಂಧ್ರದಲ್ಲಿ, ತಮಿಳುನಾಡು, ಕರ್ನಾಟಕ ಸೇರಿದಂತೆ 56 ಕೇಸ್ ಗಳು ಆರೋಪಿ ಮೇಲೆ ದಾಖಲಾಗಿವೆ ಸುಮಾರು 35 ವರ್ಷದ ವ್ಯಕ್ತಿ ಅಂತರ ರಾಜ್ಯ ಕಳ್ಳನಾಗಿದ್ದಾನೆ ಎಂದು ತಿಳಿಸಿದರು.

ಇನ್ನು ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿ ಕೊಡಲು ಪೋಲಿಸ್ ಆಯುಕ್ತ ಬಿ ರಮೇಶ್ ಬಾನೋತ್ ನಿರಾಕರಿಸಿದರು. ಆರೋಪಿ ಇನ್ನಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ, ಹೆಚ್ಚಿನ ತನಿಖೆಗೆ ಒಳಪಡಿಸುವುದಕ್ಕಾಗಿ ಆರೋಪಿಯ ವಿವರ ಕೊಡಲು  ನಿರಾಕರಿಸಿದರು.

ಪೊಲೀಸ್ ತುರ್ತು ವಾಹನ 112 ಅನ್ನು ಸದುಪಯೋಗಪಡಿಸಿಕೊಳ್ಳಿ..

ಪೊಲೀಸ್ ತುರ್ತು ವಾಹನ 112ವನ್ನ ಸಾರ್ವಜನಿಕರು ಹೆಚ್ಚಿನ ರೀತಿ ಸದುಪಯೋಗ ಪಡಿಸಿಕೊಳ್ಳಿ. ನಗರದಲ್ಲಿ ಯಾವುದೇ ಗಲಾಟೆ, ವೀಲಿಂಗ್, ಹುಡುಗಿಯರನ್ನ ರೇಗಿಸುವುದು, ಪುಂಡಪೋಕರಿಗಳ ಕಾಟ ಇದ್ದರೆ ತಕ್ಷಣ 112ಗೆ ಕರೆ ಮಾಡಿ. ನಮ್ಮ ಪೋಲಿಸರು ಕೇವಲ 5 ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸುತ್ತಾರೆ. ಪ್ರತಿ ದಿನ ಒಂದು ವಾಹನಕ್ಕೆ ಸರಾಸರಿ 3 ಕರೆ ಮಾತ್ರ ಬರುತ್ತಿವೆ. ಸಾರ್ವಜನಿಕರು ಹೆಚ್ಚಾಗಿ ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮನವಿ ಮಾಡಿದರು.

Key words: Mysore –city- police –arrest-car-thief- Police Commissioner – Ramesh Banoth