ಉಡುಪಿ ಕಾಲೇಜು ವಿಡಿಯೋ ಚಿತ್ರೀಕರಣ ಕೇಸ್: ರಾಜ್ಯಪಾಲರಿಗೆ ದೂರು ನೀಡುತ್ತೇವೆ – ಬಿಜೆಪಿ ಶಾಸಕ.  

ಉಡುಪಿ,ಆಗಸ್ಟ್,2,2023(www.justkannada.in): ಉಡುಪಿ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ದೂರು ನೀಡ್ತೇವೆ ಎಂದು ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ, ಪ್ರಕರಣಕ್ಕೆ ಸಂಬಂಧಿಸಿದಂತೆ ‘ಆಗಸ್ಟ್ 4ರ ಮಧ್ಯಾಹ್ನ 12.30ಕ್ಕೆ ರಾಜ್ಯಪಾಲರ ಭೇಟಿ ಮಾಡಿ, ಎಸ್​ಐಟಿ ತನಿಖೆಗೆ ಒತ್ತಾಯಿಸಿ ದೂರು ನೀಡುತ್ತೇವೆ. ಪೊಲೀಸರಿಗೆ ತನಿಖೆ ನಡೆಸಲು ಸರಕಾರ ಫ್ರೀ ಹ್ಯಾಂಡ್ ಬಿಟ್ಟಿಲ್ಲ. ಆರೋಪಿಗಳಿಗೆ ಬೇಲ್ ಸಿಗುವ ಸೆಕ್ಷನ್ ಹಾಕಲಾಗಿದೆ. ಬೆಳ್ಳಿಯಪ್ಪನವರ ಮೇಲೆ ವಿಶ್ವಾಸ ಇದೆ ನ್ಯಾಯ ಕೊಡುತ್ತಾರೆ ಎಂದು ತಿಳಿಸಿದರು.

Key words: Udupi -College -video –case-complain – Governor-BJP MLA.