11 ಪೊಲೀಸ್  ಇನ್ಸ್ ಪೆಕ್ಟರ್ಸ್ ಮತ್ತು 7 ಎಸಿಪಿಗಳ ವರ್ಗಾವಣೆಗೆ ತಡೆ ನೀಡಿದ ಸರ್ಕಾರ

ಬೆಂಗಳೂರು,ಆಗಸ್ಟ್ ,2,2023(www.justkannada.in):  ಕಾಂಗ್ರೆಸ್​ ಸರ್ಕಾರದಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ  ಜೋರಾಗಿದ್ದು, ನಿನ್ನೆ ವರ್ಗಾವಣೆಗೊಂಡಿದ್ದ 211 ಪೊಲೀಸ್ ಇನ್ಸ್​​ಪೆಕ್ಟರ್ ​ಗಳ  ಪೈಕಿ 11 ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೆ ಇಂದು ಸರ್ಕಾರ ತಡೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆ ಬರೋಬ್ಬರಿ 211 ಇನ್ಸ್​ಪೆಕ್ಟರ್ ​ಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಈ ಪೈಕಿ 11 ಪೊಲೀಸ್ ಇನ್ಸ್ ​​ಪೆಕ್ಟರ್​ ಗಳ ವರ್ಗಾವಣೆಯನ್ನು ಸರ್ಕಾರ ಏಕಾಏಕಿ ಇಂದು ತಡೆ ಹಿಡಿದಿದೆ.  ಬಹುತೇಕ ಜಿಲ್ಲೆ, ಸಿಸಿಬಿ , ಗುಪ್ತ ವಾರ್ತೆಯ ಪೊಲೀಸ್ ಇನ್ ಸ್ಪೆಕ್ಟರ್‌ ಗಳ ವರ್ಗಾವಣೆ ಆಗಿತ್ತು. ಇದರಲ್ಲಿ ಇದೀಗ ಕೆಲವರ ವರ್ಗಾವಣೆಯನ್ನು ದಿಢೀರ್ ತಡೆ ಹಿಡಿದಿದೆ.

ಇನ್ನು ಜುಲೈ 31 ರಂಧು 45 ಎಸಿಪಿಗಳನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು ಇದೀಗ ಈ ಪೈಕಿ 7 ಎಸಿಪಿಗಳ ವರ್ಗಾವಣೆಗೆ ತಡೆ ನೀಡಿದೆ ಎನ್ನಲಾಗಿದೆ.

Key words: Govt -stalled -transfer – 11 Police Inspectors – 7 ACPs