Friday, November 6, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಬಿಎಂಟಿಸಿ ನೌಕರರಿಗೆ 5 ಲಕ್ಷ ರೂ. ಆರೋಗ್ಯ ವಿಮೆ- ಸಚಿವ ಶ್ರೀರಾಮುಲು.

ಬಿಎಂಟಿಸಿ ನೌಕರರಿಗೆ 5 ಲಕ್ಷ ರೂ. ಆರೋಗ್ಯ ವಿಮೆ- ಸಚಿವ ಶ್ರೀರಾಮುಲು.

ಬೆಂಗಳೂರು,ಡಿಸೆಂಬರ್,14,2022(www.justkannada.in):  ಸಾರಿಗೆ ಸಚಿವ ಶ್ರೀರಾಮುಲು ಬಿಎಂಟಿಸಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, ಬಿಎಂಟಿಸಿ ನೌಕರರಿಗೆ 5 ಲಕ್ಷ ರೂ. ಆರೋಗ್ಯ ವಿಮೆಯನ್ನ ಘೋಷಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಸಾರಿಗೆ ಸಚಿವ ಶ್ರೀರಾಮುಲು, ಆರೋಗ್ಯ ರಕ್ಷಾ ಯೋಜನೆಯಡಿ ಬಿಎಂಟಿಸಿ 35 ಸಾವಿರ ನೌಕರರಿಗೆ 5 ಲಕ್ಷ ರೂ. ಆರೋಗ್ಯ ವಿಮೆ ಸೌಲಭ್ಯ ಘೋಷಿಸಲಾಗಿದೆ. ಈ ಯೋಜನೆಯಡಿ ನೌಕರರು ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಬಹುದು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ಸಿಬ್ಬಂದಿಗೆ ಆಯುಷ್ಮಾನ್ ಯೋಜನೆಯಡಿ 5 ಲಕ್ಷ ಆರೋಗ್ಯ ವಿಮೆ ನೀಡುತ್ತಿದೆ ಎಂದಿದ್ದಾರೆ.

ನಿಗಮದ ಸಿಬ್ಬಂದಿಗಳು ಹಾಗೂ ಕುಟುಂಬದವ್ರು ಯಾವುದೇ ಅನಾರೋಗ್ಯಕ್ಕೊಳಗಾದರೆ ಈ ಯೋಜನೆಯಡಿ ಅವರು ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಆರೋಗ್ಯ ಸಚಿವರು ಹಾಗೂ ಇಲಾಖೆ ಜೊತೆ ಈಗಾಗಲೇ ಬಿಎಂಟಿಸಿ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ.ಬಿಎಂಟಿಸಿ ನೌಕರರಿಗೆ 5 ಲಕ್ಷ ರೂ. ಆರೋಗ್ಯ ವಿಮೆ- ಸಚಿವ ಶ್ರೀರಾಮುಲು sriramulu

ದೀರ್ಘ ಕಾಲಿಕ ರೋಗ, ಹೃದಯ ಬೈಪಾಸ್ ಸರ್ಜರಿ ಸೇರಿ ಹಲವು ಕಾಯಿಲೆಗಳಿಂದ ನೌಕರರು ಬಳಲುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ನೌಕರರಿಗೆ ಚಿಕಿತ್ಸೆ ಸಿಗದೆ ಪರದಾಡುತ್ತಿರುವ ಹಿನ್ನಲೆ ಆರೋಗ್ಯ ವಿಮೆ ಯೋಜನೆಗೆ ಬಿಎಂಟಿಸಿ ನಿರ್ಧರಿಸಿದೆ ಎನ್ನಲಾಗಿದೆ.

Key words: BMTC employees-5 lakhs – Health insurance-  Minister -Sriramulu