ಕಾರು ಮತ್ತು ಕ್ಯಾಂಟರ್ ನಡುವೆ ಡಿಕ್ಕಿ: ಅಪಘಾತದಲ್ಲಿ ನಾಲ್ವರು ಸಾವು.

ತುಮಕೂರು,ಡಿಸೆಂಬರ್,14,2022(www.justkannada.in): ಕಾರು ಮತ್ತು ಕ್ಯಾಂಟರ್ ನಡುವೆ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕೊಂಡ್ಲಿ ಕ್ರಾಸ್ ಬಳಿ ನಡೆದಿದೆ.

ಚಿಕ್ಕನಾಯಕಹಳ್ಳಿ ತಾಲ್ಲೂಕು ನಡುವಿನಹಳ್ಳಿ ಗ್ರಾಮದ ರಾಮಣ್ಣ(58), ನಾರಾಯಣಪ್ಪ(54), ನಾಗರತ್ನ(40), ಸಾಗರ್(23) ಮೃತಪಟ್ಟವರು.

ತುಮಕೂರಿನಿಂದ ಕೆ.ಬಿ ಕ್ರಾಸ್ ಕಡೆ ಹೋಗುತ್ತಿದ್ದ ಕ್ಯಾಂಟರ್ ಮತ್ತು ಕೆ.ಬಿ ಕ್ರಾಸ್ ನಿಂದ ತುಮಕೂರು ಕಡೆಗೆ ತೆರಳುತ್ತಿದ್ದ ಕಾರು ನಡುವೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Key words: Collision-between- car – canter-Four -died