Saturday, September 12, 2026

BDA Apartments

ಮನೆ ಬಳಿ ಚಿರತೆ ಪ್ರತ್ಯಕ್ಷ : ಇಬ್ಬರ ಮೇಲೆ ದಾಳಿ… BDA JK_Adv BDA Adv
Home Crime ಮನೆ ಬಳಿ ಚಿರತೆ ಪ್ರತ್ಯಕ್ಷ : ಇಬ್ಬರ ಮೇಲೆ ದಾಳಿ…

ಮನೆ ಬಳಿ ಚಿರತೆ ಪ್ರತ್ಯಕ್ಷ : ಇಬ್ಬರ ಮೇಲೆ ದಾಳಿ…

ಮೈಸೂರು,ಮೇ, 10,2019(www.justkannada.in):  ಮನೆ ಬಳಿ ಚಿರತೆ ಪ್ರತ್ಯಕ್ಷವಾಗಿ ಇಬ್ಬರು ವ್ಯಕ್ತಿಗಳ  ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.

ಹೆಚ್.ಡಿ.ಕೋಟೆ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ದಾಸಪ್ಪ ಹಾಗೂ ಮೂರ್ತಿ  ಚಿರತೆ ದಾಳಿಯಿಂದ ಗಾಯಗೊಂಡವರು. ಗ್ರಾಮದ ಗೌರಮ್ಮ ಮನೆ ಹತ್ತಿರ ಚಿರತೆ ಕಾಣಿಸಿಕೊಂಡಿತ್ತು. ಈ ವೇಳೆ ಜನರು ಚಿರತೆಯನ್ನು ಕಾಡಿಗೆ ಅಟ್ಟಲು ಮುಂದಾದಾಗ ಏಕಾಏಕಿ ಚಿರತೆ ದಾಳಿ ನಡೆಸಿದೆ.

ಗಾಯಗೊಂಡ ದಾಸಪ್ಪ ಹಾಗೂ .ಮೂರ್ತಿ ಅವರನ್ನ ಹೆಚ್.ಡಿ.ಕೋಟೆ.ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಚಿರತೆ ನಿಂಗಣ್ಣಸ್ವಾಮಿ ಪಾಳು ಮನೆಯಲ್ಲಿ ಅವಿತಿತ್ತು. ಇದೀಗ ಚಿರತೆ ಸೆರೆ ಹಿಡಿಯಲಾಗಿದೆ.

Key words: Leopard –near- home- Attack -two …