Saturday, September 12, 2026

BDA Apartments

18th BRICS Summit New DelhiPM Modi BRICS speechGlobal South unityGlobal BDA JK_Adv BDA Adv
Home Front Page 18ನೇ ಬ್ರಿಕ್ಸ್ ಶೃಂಗಸಭೆ: ಒಗ್ಗಟ್ಟಿನ ಮಂತ್ರ ಜಪಿಸಿದ ಪ್ರಧಾನಿ ಮೋದಿ

18ನೇ ಬ್ರಿಕ್ಸ್ ಶೃಂಗಸಭೆ: ಒಗ್ಗಟ್ಟಿನ ಮಂತ್ರ ಜಪಿಸಿದ ಪ್ರಧಾನಿ ಮೋದಿ

ನವದೆಹಲಿ,ಸೆಪ್ಟಂಬರ್,12,2026 (www.justkannada.in): ಬ್ರಿಕ್ಸ್ ಒಕ್ಕೂಟ ಯಾವುದೇ ದೇಶದ ವಿರುದ್ಧವಿಲ್ಲ. ಬ್ರಿಕ್ಸ್ ದೇಶಗಳ ನಡುವೆ ಸಂಬಂಧ ವೃದ್ಧಿಗೆ ಸ್ಥಿತಿಸ್ಥಾಪಕತ್ವವಾಗಿದೆ. ಭಾರತ ಮಾನವೀಯತೆಗೆ ಮೊದಲ ಆದ್ಯತೆ ನೀಡುತ್ತದೆ. ಎಲ್ಲರನ್ನೂ ಒಗ್ಗಟ್ಟಾಗಿ ಜೊತೆಗೆ ಕರೆದುಕೊಂಡು ಹೋಗುವುದು ನಮ್ಮ ಉದ್ದೇಶ ಎಂದು ಪ್ರಧಾನಿ ಮೋದಿ ಒಗ್ಗಟ್ಟಿನ ಮಂತ್ರ ಜಪಿಸಿದರು.

ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮಾನವೀಯತೆಗೆ ಮೊದಲ ಆದ್ಯತೆ ನೀಡುತ್ತದೆ. ಎಲ್ಲರನ್ನೂ ಒಗ್ಗಟ್ಟಾಗಿ ಜೊತೆಗೆ ಕರೆದುಕೊಂಡು ಹೋಗುವುದು ನಮ್ಮ ಉದ್ದೇಶ. ಈ ವರ್ಷದ ಬ್ರಿಕ್ಸ್ ಶೃಂಗಸಭೆ ಐತಿಹಾಸಿಕ ಮೈಲುಗಲ್ಲು ಹಾಗೂ ವಿಶೇಷ ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು.18th BRICS Summit New DelhiPM Modi BRICS speechGlobal South unityGlobal governance reformIndia BRICS 2026 brics

ಕಳೇದ 20 ವರ್ಷಗಳಲ್ಲಿ ಬ್ರಿಕ್ಸ್ ಒಕ್ಕೂಟ ಒಳ್ಳೆಯ ಕೆಲಸ ಮಾಡಿದೆ. ಭವಿಷ್ಯದ  20 ವರ್ಷಗಳ ಅಜೆಂಡಾದ ಮೇಲೆ ಕೆಲಸ ಮಾಡುತ್ತಿದೆ.  ಬ್ರಿಕ್ಸ್ ಒಕ್ಕೂಟ ದೇಶಗಳನ್ನು ಪರಸ್ಪರ ಒಗ್ಗೂಡಿಸುತ್ತಿದೆ.  ಬ್ರಿಕ್ಸ್ ಒಕ್ಕೂಟ ಇದು ಯಾವುದೇ ದೇಶದ ವಿರುದ್ದವಾಗಿ ಇಲ್ಲ.  ಜಾಗತಿಕ ಸುಧಾರಣೆಯೇ ನಮ್ಮ ಅಜೆಂಡಾ. ನಾವೆಲ್ಲಾ ಒಟ್ಟಾಗಿ ಹೋಗಬೇಕಿದೆ ಒಟ್ಟಾಗಿ ಇರಬೇಕಿದೆ ಎಂದರು.18th BRICS Summit New DelhiPM Modi BRICS speechGlobal South unityGlobal jk02_new jk02 new

ಬ್ರಿಕ್ಸ್ ಸ್ಥಾಪನೆಯಾಗಿ 20 ವರ್ಷ ಪೂರ್ಣಗೊಂಡ ಹಿನ್ನೆಲೆಯಲಿ ಈ ಬ್ರಿಕ್ಸ್ ಶೃಂಗಸಭೆಗೆ ವಿಶೇಷ ಮಹತ್ವವಿದೆ. 20ನೇ ವಯಸ್ಸು ಮಾನವನ ಜೀವನದಲ್ಲಿ ಪರಿಪಕ್ವತೆ, ಜವಾಬ್ದಾರಿಯ ಹೊಸ ಹಂತವನ್ನು ತಲುಪತ್ತದೆ. ಅದೇ ರೀತಿ ಬ್ರಿಕ್ಸ್ ಕೂಡ ಈಗ ಪ್ರೌಢಾವಸ್ಥೆ ಹಂತಕ್ಕೆ ಪ್ರವೇಶಿಸಿದೆ. ಈಗ ಬ್ರಿಕ್ಸ್ ಜಾಗತಿಕ ವೇದಿಕೆಯಲ್ಲಿ ವಿಶಿಷ್ಟ ಗುರುತು ಮೂಡಿಸಿದೆ. ಮುಂದಿನ ಹಂತದಲ್ಲಿ ಪರಸ್ಪರ ಗೌರವ, ಸಹಕಾರ ಮತ್ತು ಜವಾಬ್ದಾರಿಯೊಂದಿಗೆ ಬ್ರಿಕ್ಸ್ ದೇಶಗಳ ಸಂಘಟನೆಯನ್ನು ಮತ್ತಷ್ಟು ಬಲಪಡಿಸೋಣ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

 

English Summary
Title

18th BRICS Summit: PM Modi Champions Global Unity & Global South Reforms

Short Description
At the 18th BRICS Summit in New Delhi, Prime Minister Narendra Modi championed global unity and inclusivity. Marking the grouping's 20th anniversary, PM Modi emphasized that BRICS does not oppose any specific nation or bloc. Instead, it serves as a powerful platform to amplify the voices of the Global South and dismantle the "pyramid of privilege" in global governance. To ensure structural continuity beyond rotating chairships, he proposed a formal "Troika" implementation mechanism. Modi urged member states to stay united, calling for an equitable international order where developing nations hold an equal stake and actively shape the roadmap for comprehensive global reform.
Keywords
18th BRICS Summit New DelhiPM Modi BRICS speechGlobal South unityGlobal governance reformIndia BRICS 2026