Saturday, September 12, 2026

BDA Apartments

Mysuru BDA JK_Adv BDA Adv
Home Front Page ಮೈಸೂರು: ಅಂಚೆ ಇಲಾಖೆಯಿಂದ ಉಚಿತ ಆಧಾರ್ ಕ್ಯಾಂಪ್

ಮೈಸೂರು: ಅಂಚೆ ಇಲಾಖೆಯಿಂದ ಉಚಿತ ಆಧಾರ್ ಕ್ಯಾಂಪ್

ಮೈಸೂರು,ಸೆಪ್ಟಂಬರ್,12,2026 (www.justkannada.in): ಅಂಚೆ ಇಲಾಖೆ ವತಿಯಿಂದ ಸಂಘ-ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಉಚಿತವಾಗಿ ಆಧಾರ್ ಕ್ಯಾಂಪ್ ಗಳನ್ನು ಅವರ ಸ್ಥಳದಲ್ಲಿಯೇ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ  ಜಿ. ಹರೀಶ್ ತಿಳಿಸಿದ್ದಾರೆ.

ಈ ಕ್ಯಾಂಪ್ ಗಳಲ್ಲಿ ಆಧಾರ್ ಗೆ ಸಂಬಂಧಿಸಿದ ಎಲ್ಲಾ ರೀತಿಯ ತಿದ್ದುಪಡಿಗಳನ್ನು ಮಾಡಲಾಗುವುದಲ್ಲದೆ ಹೊಸ ಆದಾರ್ ಕಾರ್ಡ್ ಗಳನ್ನೂ ಕೂಡ ಮಾಡಿಕೊಡಲಾಗುವುದು. ಕ್ಯಾಂಪ್ ಗಳನ್ನು ಉಚಿತವಾಗಿ ನಡೆಸಿಕೊಡಲಾಗುತ್ತದೆ. ಆದರೆ ತಿದ್ದುಪಡಿ ಅಥವಾ ಹೊಸ ಆಧಾರ್ ಕಾರ್ಡ್ ಗಳನ್ನು ಮಾಡಿಸಿಕೊಳ್ಳುವವರು ಯುಐಡಿಐ ನಿಗದಿ ಪಡಿಸಿರುವ ದರಗಳನ್ನು ಪಾವತಿಸಬೇಕಾಗುತ್ತದೆ ಎಂದು ಹಿರಿಯ ಅಂಚೆ ಅಧೀಕ್ಷಕ  ಜಿ. ಹರೀಶ್ ತಿಳಿಸಿದ್ದಾರೆ.

ಹಾಗೆಯೇ ಆಧಾರ್ ಕ್ಯಾಂಪ್ ಗಳನ್ನು ನಡೆಸಲು ಇಚ್ಚಿಸುವ ಸಂಘ-ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಮೊಬೈಲ್ ಸಂಖ್ಯೆ 9448402346 ಮತ್ತು 8660612795ಅನ್ನು ಸಂಪರ್ಕಿಸಿ ನೊಂದಾಯಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.Mysuru jk02_new jk02 new

 

English Summary
Title

Free Aadhaar Enrolment & Correction Camps by Postal Department in Mysuru

Short Description
The Department of Posts offers new Aadhaar enrolments and mandatory child biometric updates completely free of cost across India Post Aadhaar Centers. Fully operational Aadhaar Seva Kendras are available on working days from 9:30 AM to 4:00 PM at key locations including the Head Post Office Mysore on Ashoka Road, Saraswathipuram, Yadavagiri, and Metagalli. While new registrations are free, minor demographic changes like mobile number or address updates attract a minimal fee. Residents can also check with local postmasters regarding temporary local outreach camps
Keywords
Mysuru, Free, Aadhaar camp, Postal Department