Saturday, September 12, 2026

BDA Apartments

Siddaramaiah BDA JK_Adv BDA Adv
Home Front Page ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿಯಲ್ಲಿ ಸಿದ್ದರಾಮಯ್ಯ ಕೈವಾಡ ಅನ್ನೋದು ರಾಜಕೀಯ-ಪ್ರತಾಪ್ ಸಿಂಹ

ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿಯಲ್ಲಿ ಸಿದ್ದರಾಮಯ್ಯ ಕೈವಾಡ ಅನ್ನೋದು ರಾಜಕೀಯ-ಪ್ರತಾಪ್ ಸಿಂಹ

ಮೈಸೂರು,ಸೆಪ್ಟಂಬರ್,12,2026 (www.justkannada.in): ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೈವಾಡವಿದೆ ಅನ್ನೋದು ರಾಜಕೀಯ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಎಲ್ಲದಕ್ಕೂ ರಾಜಕೀಯ ಮಾಡೋದು ಸರಿಯಲ್ಲ.  ಈ ಹಿಂದೆ ಬಿಜೆಪಿ ನಾಯಕರ ಮನೆ ಮೇಲೂ ಇಡಿ ದಾಳಿಯಾಗಿದೆ.  ನಟ ನಟಿಯರ ಮನೆ ಮೇಲೂ ದಾಳಿಯಾಗಿದೆ. ಇಡಿ ಅಧಿಕಾರಿಗಳ ದಾಳಿ ವಿಚಾರದಲ್ಲಿ ರಾಜಕೀಯ ಮಾಡೋದು ತಪ್ಪು ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಚಿತಾವಣೆ ಇರುವ ಒಂದೇ ವಿಚಾರ ಅಂದರೇ  ಮಾಜಿ ಸಚಿವ ಮಹದೇವಪ್ಪ ಮನೆ ಖಾಲಿ ಮಾಡಿಸಿದ್ದು. ಮಹದೇವಪ್ಪರನ್ನ ಏಕಾಏಕಿ ಮನೆ ಖಾಲಿ ಮಾಡಿಸಿದ್ದು ಸಿದ್ದರಾಮಯ್ಯ ಎಂದು ಪ್ರತಾಪ್ ಸಿಂಹ ಹೇಳಿದರು.Siddaramaiah jk02_new jk02 new

Key words: Siddaramaiah, involvement, ED raid, Satish Jarkiholi, political, Pratap Simha.

English Summary
Title

Pratap Simha Dismisses Siddaramaiah Link in ED Raids on Satish Jarkiholi

Short Description
Former BJP MP Pratap Simha stated that linking Karnataka CM Siddaramaiah to the Enforcement Directorate (ED) raids on PWD Minister Satish Jarkiholi is purely political. Following ED searches at multiple locations linked to Jarkiholi over alleged PWD contract irregularities and foreign investments, rumors surfaced suggesting internal Congress rivalry prompted the action. Simha dismissed these claims, asserting that tying the federal probe to Siddaramaiah is just political talk rather than factual truth, even as Congress labels the wider crackdown a central witch hunt.
Keywords
Siddaramaiah, involvement, ED raid, Satish Jarkiholi, political, Pratap Simha.