Saturday, September 12, 2026

BDA Apartments

Bengaluru meat sale ban BDA JK_Adv BDA Adv
Home Front Page ಸೆ.14 ರಂದು ಪ್ರಾಣಿವಧೆ, ಮಾಂಸ ಮಾರಾಟಕ್ಕೆ ನಿಷೇಧ

ಸೆ.14 ರಂದು ಪ್ರಾಣಿವಧೆ, ಮಾಂಸ ಮಾರಾಟಕ್ಕೆ ನಿಷೇಧ

ಬೆಂಗಳೂರು,ಸೆಪ್ಟಂಬರ್,12,2026 (www.justkannada.in):  ಸೆಪ್ಟಂಬರ್ 14 ರಂದು  ಗಣೇಶ ಚತುರ್ಥಿ  ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಅಂದು ಪ್ರಾಣಿವಧೆ, ಮಾಂಸ ಮಾರಾಟಕ್ಕೆ ನಿಷೇಧ ವಿಧಿಸಿ ಜಿಬಿಎ ಉಪ ನಿರ್ದೇಶಕರು (ಪಶುಪಾಲನೆ)  ಆದೇಶ ಹೊರಡಿಸಿದ್ದಾರೆ.

ಜಿಬಿಎ ಪಶುಪಾಲನೆ ವಿಭಾಗದ ಉಪ ನಿರ್ದೇಶಕರು ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಜಿಬಿಎ ವ್ಯಾಪ್ತಿಯ ಎಲ್ಲಾ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮಾಡುವುದನ್ನು ಹಾಗೂ ಮಾಂಸದ ಮಳಿಗೆಗಳಲ್ಲಿ ಮಾಂಸ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.Bengaluru meat sale ban meal ban

ಹಬ್ಬದ ದಿನದಂದು ಸಾರ್ವಜನಿಕರು ಹಾಗೂ ವ್ಯಾಪಾರಿಗಳು ನಿಷೇಧದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ಆದೇಶ ಉಲ್ಲಂಘಿಸಿ ಅಕ್ರಮವಾಗಿ ಪ್ರಾಣಿವಧೆ ಅಥವಾ ಮಾಂಸ ಮಾರಾಟ ಮಾಡಿದ್ದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು  ಎಚ್ಚರಿಕೆ ನೀಡಿದ್ದಾರೆ.September 14 meat ban jk02_new jk02 new

Key words: Ban, animal slaughter, meat sales, September 14, Bengaluru

English Summary
Title

Bengaluru Meat Sale Ban on Sept 14:

Short Description
The Greater Bengaluru Authority (GBA) has announced a complete citywide ban on animal slaughter and meat sales in Bengaluru on Monday, September 14, 2026, for Ganesh Chaturthi. According to the official GBA Animal Husbandry Department directive, all slaughterhouses, fish markets, and retail chicken or mutton shops across the city must remain closed for the day. This temporary restriction is a standard cultural practice implemented during major local festivals. Residents are advised to plan their purchases ahead of the festival closure.
Keywords
Bengaluru meat sale ban, September 14 meat ban, GBA meat ban, Ganesh Chaturthi