ಬೆಂಗಳೂರು,ಸೆಪ್ಟಂಬರ್,12,2026 (www.justkannada.in): ಇಡಿ ದಾಳಿಯಿಂದ ನನಗೆ ಯಾವುದೇ ಡ್ಯಾಮೇಜ್ ಆಗುವುದಿಲ್ಲ, ಇಡಿಯವರು ನೋಟಿಸ್ ಕೊಟ್ಟರೇ ಉತ್ತರ ನೀಡುತ್ತೇನೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಇಡಿ ದಾಳಿ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ವಿದೇಶದಲ್ಲಿ ಹೂಡಿಕೆಯ ಬಗ್ಗೆ ಅನುಮಾನ ಎಂದು ಇಡಿ ಹೇಳಿದ್ದಾರೆ. ಆದರೆ ನಾನು ಹೂಡಿಕೆ ಮಾಡಿಲ್ಲ ಎಂದು ಇಡೀ ಅಧಿಕಾರಿಗಳಿಗೆ ಹೇಳಿದ್ದೇನೆ. ಇಡಿಯವರು ನೋಟಿಸ್ ನೀಡಿದರೆ ವಿಚಾರಣೆಗೆ ಹಾಜರಾಗುತ್ತೇನೆ ಎಂದರು.
ತಮ್ಮನ್ನು ಉದ್ಯಮಿ ವಿಜಯ್ ಮಲ್ಯ ಬೆಂಬಲಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಥ್ಯಾಂಕ್ಸ್ ಅಂತ ಹೇಳಿ ನಕ್ಕಿದರು. ಅವರು ನಮ್ಮ ಫ್ಯಾನ್ಸ್ ಕ್ಲಬ್ ಗೆ ಸೇರಿದರು ಹಾಗಿದ್ದರೆ ಎಂದು ಹಾಸ್ಯವಾಗಿ ನುಡಿದರು.







