Saturday, September 12, 2026

BDA Apartments

Mysuru BDA JK_Adv BDA Adv
Home Front Page ಮೈಸೂರಿನಲ್ಲಿ ಸಿಕ್ಕ ಡೈರಿ ಸತೀಶ್ ಜಾರಕಿಹೊಳಿ ಮೇಲಿನ ED ದಾಳಿಗೆ ಕಾರಣ?

ಮೈಸೂರಿನಲ್ಲಿ ಸಿಕ್ಕ ಡೈರಿ ಸತೀಶ್ ಜಾರಕಿಹೊಳಿ ಮೇಲಿನ ED ದಾಳಿಗೆ ಕಾರಣ?

ಮೈಸೂರು,ಸೆಪ್ಟಂಬರ್,12,2026 (www.justkannada.in): ಸತೀಶ್ ಜಾರಕಿಹೊಳಿ ವಿರುದ್ಧದ ಜಾರಿ ನಿರ್ದೇಶನಾಲಯದ (ED) ಕಾರ್ಯಾಚರಣೆಗೆ ಮೈಸೂರಿನಲ್ಲಿ ಸಿಕ್ಕಿದ್ದ ಎನ್ನಲಾದ ರಹಸ್ಯ ಡೈರಿಯೇ ಪ್ರಮುಖ ಕಾರಣ ಎಂಬ ಮಾಹಿತಿ ಇದೀಗ ಮುನ್ನೆಲೆಗೆ ಬಂದಿದೆ.

ಮೂರು ತಿಂಗಳ ಹಿಂದೆಯೇ ಬಲೆ ಬೀಸಿದ್ದ ED ಅಧಿಕಾರಿಗಳು, ಜೂನ್ 26ರಂದು ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸತೀಶ್ ಜಾರಕಿಹೊಳಿ ಅವರ ಬಾಮೈದ ಮಂಜುನಾಥ್ ನಿವಾಸದ ಮೇಲೆ ದಾಳಿ ನಡೆಸಿದ್ದರು. ಎರಡು ದಿನಗಳ ಕಾಲ ನಡೆದ ತಲಾಶ್ ವೇಳೆ ಡೈರಿ ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ.Mysuru sathish jarakiholi

ಡೈರಿಯಲ್ಲಿದ್ದ ಹಲವು ಸ್ಫೋಟಕ ಮಾಹಿತಿಗಳು ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದ್ದವು ಎಂಬ ಮಾತು ಕೇಳಿಬರುತ್ತಿದೆ. ಮೈಸೂರು ಮನೆಯಲ್ಲಿ ನೂರಾರು ಬಾರ್ ಲೈಸೆನ್ಸ್‌ ಗಳು, ಬೆಳಗಾವಿ, ಗೋವಾ ಹಾಗೂ ಮಹಾರಾಷ್ಟ್ರದಲ್ಲಿನ ಆಸ್ತಿಗಳ ವಿವರಗಳು ಪತ್ತೆಯಾಗಿದ್ದವು ಎನ್ನಲಾಗಿದೆ.

ಅಲ್ಲದೆ, ಕರ್ನಾಟಕ–ಕೇರಳ ಗಡಿಯ ಬಾವಲಿ ಚೆಕ್‌ ಪೋಸ್ಟ್ ಬಳಿ ಅಕ್ರಮ ಮದ್ಯದಂಗಡಿ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಯೂ ಡೈರಿಯಲ್ಲಿ ದಾಖಲಾಗಿತ್ತು ಎನ್ನಲಾಗುತ್ತಿದೆ.Diary sathish jarkiholi

ಎರಡು ದಿನಗಳ ತಲಾಶ್ ಬಳಿಕ ಡೈರಿ ಹಾಗೂ ದಾಖಲೆಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದ ED ಅಧಿಕಾರಿಗಳು, ಇದೀಗ ಅದರಲ್ಲಿನ ಮಾಹಿತಿಯ ಆಧಾರದಲ್ಲಿ ಮುಂದಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.Sparks jk02_new jk02 new

ಮೈಸೂರಿನಲ್ಲಿ ಸಿಕ್ಕ ಡೈರಿ ಇದೀಗ ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ

English Summary
Title

Mysuru Diary Sparks ED Action?

Short Description
A diary reportedly recovered during an ED raid at the Mysuru residence of Satish Jarkiholi’s brother-in-law Manjunath on June 26 is said to contain explosive information. ED officials reportedly seized the diary and several documents after a two-day search, including details of bar licences, properties in Karnataka, Goa and Maharashtra, and alleged illegal liquor dealings near the Karnataka–Kerala border. The diary is now believed to be a key focus of the ED investigation.
Keywords
Mysuru, Diary, Sparks, ED Action, Sathish jarkiholi