Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಮೇ29 ರಂದು ಆನೇಕಲ್ ಪುರಸಭೆ ಮತ್ತು ಹೆಬ್ಬಗೋಡಿ ನಗರಸಭೆ 26ನೇ ವಾರ್ಡ್ ಗೆ ಚುನಾವಣೆ…

ಮೇ29 ರಂದು ಆನೇಕಲ್ ಪುರಸಭೆ ಮತ್ತು ಹೆಬ್ಬಗೋಡಿ ನಗರಸಭೆ 26ನೇ ವಾರ್ಡ್ ಗೆ ಚುನಾವಣೆ…

ಬೆಂಗಳೂರು, ಮೇ 10,2019(www.justkannada.in): ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪುರಸಭೆಗೆ ಮೇ 29 ರಂದು ಚುನಾವಣೆ ನಡೆಯಲಿದೆ. ಅಲ್ಲದೆ, ಅದೇ ದಿನ ಹೆಬ್ಬಗೋಡಿ ನಗರ ಸಭೆಯ 26ನೇ  ವಾರ್ಡ್ ಗೂ ಚುನಾವಣೆ ನಡೆಯಲಿದೆ.

ಚುನಾವಣಾ ವೇಳಾಪಟ್ಟಿ :

ಎಲ್ಲಾ ಕಾರ್ಯ ದಿನಗಳಲ್ಲಿ ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ ನಾಮ ಪತ್ರಗಳನ್ನು ಸಲ್ಲಿಸಬಹುದಾಗಿದೆ. ಅಂತೆಯೇ, ನಾಮಪತ್ರಗಳನ್ನು ಸಲ್ಲಿಸಲು ಮೇ 16 ಕೊನೆಯ ದಿನಾಂಕ ವಾಗಿದೆ. ಮೇ 17 ರಂದು ಬೆಳಿಗ್ಗೆ 11-00 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮೇ 20 ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದು, ಅಂದು ಮಧ್ಯಾಹ್ನ 3-00 ಗಂಟೆಯೊಳಗೆ ನಾಮಪತ್ರ ಹಿಂಪಡೆಯಬಹುದಾಗಿದೆ.

ಮತದಾನ ಅವಶ್ಯವಿದ್ದಲ್ಲಿ, ಮೇ 29 ರಂದು ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅವಶ್ಯಕತೆ ಇದ್ದಲ್ಲಿ, ಮೇ 30 ರಂದು ನಡೆಸಲಾಗುವುದು. ಮೇ 31 ರಂದು ತಾಲ್ಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ. ಎಂ. ವಿಜಯ್ ಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Elections – Anekal- Municipality –Hebbagodi- Municipal Council -26th Ward – May 29th