ಲೋಕಸಭೆಯಿಂದ ಈವರೆಗೆ 14 ಸಂಸದರು ಅಮಾನತು.

ನವದೆಹಲಿ,ಡಿಸೆಂಬರ್,14,2023(www.justkannada.in): ಭದ್ರತಾ ವೈಪಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಹಿನ್ನೆಲೆ 14 ಸಂಸದರನ್ನ ಅಮಾನತು ಮಾಡಲಾಗಿದೆ.

ಮೊದಲಿಗೆ ಲೋಕಸಭೆಯಿಂದ ಐವರು ಸಂಸದರು ಅಮಾನತುಗೊಳಿಸಲಾಗಿತ್ತು.  ಜ್ಯೋತಿಮಣಿ,  ಹೈಬಿ ಈಡನ್ , ಡೀನ್   ಕುರಿಯಾಕೋಸ್ ಸೇರಿ ಐವರನ್ನು ಅಮಾನತು ಮಾಡಲಾಗಿತ್ತು. ನಂತರ 9 ಮಂದಿ ಸಂಸದರನ್ನ ಅಮಾನತು ಮಾಡಲಾಗಿದೆ. ಟಿಎನ್ ಪ್ರತಾಪನ್, ಹೈಬಿ ಈಡನ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಅವರನ್ನು ಅಮಾನತುಗೊಳಿಸಲಾಗಿದೆ.

ಚಳಿಗಾಲ ಅಧಿವೇಶನ ಮುಗಿಯುವವರೆಗೂ 14 ಮಂದಿಯನ್ನ ಅಮಾನತು ಮಾಡಲಾಗಿದೆ.  ಈ ವಿಚಾರದಲ್ಲಿ ಯಾವುದೇ ಸದಸ್ಯರಿಂದ ರಾಜಕೀಯ ನಿರೀಕ್ಷಿಸುವುದಿಲ್ಲ, ಪಕ್ಷ ರಾಜಕಾರಣ ಮೀರಿ ಕೆಲಸ ಮಾಡಬೇಕು ಎಂದು ಸ್ಪೀಕರ್ ಹೇಳಿದ್ದಾರೆ.

Key words: 14 MPs – suspended- from – Lok Sabha.