ಲೋಕಸಭೆಯಲ್ಲಿ ದಾಳಿ ಪ್ರಕರಣ: ಮೈಸೂರಿನಲ್ಲಿ ಆಂತರಿಕ ಭದ್ರತಾ ಪಡೆ ಅಧಿಕಾರಿಗಳಿಂದ ವಿಚಾರಣೆ

ಮೈಸೂರು,ಡಿಸೆಂಬರ್,14,2023(www.justkannada.in): ಲೋಕಸಭೆ ಕಲಾಪದ ವೇಳೆ ನುಗ್ಗಿ ಆತಂಕ ಸೃಷ್ಠಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೈಸೂರಿನಲ್ಲಿ ಆಂತರಿಕ ಭದ್ರತಾ ಪಡೆ ಅಧಿಕಾರಿಗಳು ಮನೋರಂಜನ್ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.

ನಿನ್ನೆ ಲೋಕಸಭೆ ಕಲಾಪ ವೇಳೆ ಮನೋರಂಜನ್ ಮತ್ತು ಸಾಗರ್ ಶರ್ಮಾ ನುಗ್ಗಿದ್ದು ದೇಶದಲ್ಲಿ ಭಾರಿ ಸುದ್ದಿಯಾಗಿದೆ. ಈ ಸಂಬಂಧ  ಮೈಸೂರಿನ ಮನೋರಂಜನ್  ನಿವಾಸಕ್ಕೆ ಆಂತರಿಕ ಭದ್ರತಾ ಪಡೆ ಅಧಿಕಾರಿಗಳು  ಭೇಟಿ ನೀಡಿ ವಿಚಾರಣೆ  ನಡೆಸಿದ್ದಾರೆ. ಆಂತರಿಕ ಭದ್ರತಾ ಪಡೆ ಅಧಿಕಾರಿಗಳ ಮುಂದೆ ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ.

ಮನೋರಂಜನ್ ಮನೆಗೆ ಸಾಗರ್ ಶರ್ಮ ಎರಡು ಬಾರಿ ಬಂದು ಹೋಗಿದ್ದ ಈ ವೇಳೆ ಊಟ ಮಾಡಿಕೊಂಡು ಹೋಗಿದ್ದ. ಆದರೆ ಸದ್ಯದ ಮಾಹಿತಿ ಪ್ರಕಾರ ಇಲ್ಲಿ ಉಳಿದುಕೊಂಡಿರಲಿಲ್ಲ ಎಂದು ಮನೋರಂಜನ್ ಕುಟುಂಬಸ್ಥರು ಮಾಹಿತಿ‌ ನೀಡಿದ್ದಾರೆ.

ಕುಟುಂಬಸ್ಥರ ಬಳಿಯು ಮನೋರಂಜನ್ ಹೆಚ್ಚು ಮಾತನಾಡಿರಲಿಲ್ಲವಂತೆ‌. ಹೆಚ್ಚು ಪುಸ್ತಕವನ್ನು ಓದುತ್ತಿದ್ದ, ಹೆಚ್ಚು ಮಾತನಾಡುತ್ತಿರಲ್ಲ. ಆದರ್ಶ ವ್ಯಕ್ತಿತ್ವದ ಹಿನ್ನೆಲೆ ತೋರಿಸಿಕೊಂಡಿದ್ದ ಎನ್ನಲಾಗಿದೆ.

ಸಂಸತ್ ಭವನಕ್ಕೆ ನುಗ್ಗಿದ ಮನೋರಂಜನ್ ಸಾಫ್ಟ್ ವೇರ್ ಪಂಟರ್ ಆಗಿದ್ದು ಎಲ್ಲಿಯೂ ವಾಟ್ಸಾಪ್, ಇನ್ ಸ್ಟಾ ಗ್ರಾಂ, ಫೇಸ್ ಬುಕ್ ಐಡಿ ಬಿಟ್ಟುಕೊಡದ ಬ್ರಿಲಿಯೆಂಟ್ ಆಗಿದ್ದನು.  ತಂಗಿ ಮದುವೆ ಸಂದರ್ಭದಲ್ಲಿ ಎಲ್ಲಾ ಜಾಲತಾಣದಲ್ಲೂ ಸಕ್ರಿಯನಾಗಿದ್ದ. ಕಳೆದ ಮೂರು ತಿಂಗಳಿಂದ ಎಲ್ಲಾ ಅಕೌಂಟ್ ಗಳು ಡಿಆಕ್ಟೀವ್ ಆಗಿತ್ತು. ತನ್ನ ಗುರುತು ಪತ್ತೆ ಆಗಬಾರದು ಎಂಬ ಕಾರಣಕ್ಕೆ ಮನೋರಂಜನ್ ಜಾಲತಾಣಗಳಲ್ಲಿ ಇನ್ ಆಕ್ಟೀವ್ ಆಗಿ ಗುರುತು ಮರೆಮಾಚಿದ್ದ.

ಕ್ರಾಂತಿಕಾರಿ ಪುಸ್ತಕಗಳೇ ಪ್ರೇರಣೆ. ಕಿಕ್ ಬಾಕ್ಸಿಂಗ್ ಮನೋರಂಜನ್ ಹವ್ಯಾಸ. ಎಂಜಿನಿಯರಿಂಗ್ ಮುಗಿಸಿದ್ರೂ ನಿರುದ್ಯೋಗಿ ಆಗಿದ್ದ ಮನೋರಂಜನ್ ಕೆಲಸಕ್ಕೂ ಹೋಗದೆ, ಮದುವೆಯನ್ನೂ ಆಗದೆ ಒಬ್ಬಂಟಿಯಾಗಿದ್ದ. ಮನೆ ಸುತ್ತ -ಮುತ್ತ ಅಪರಿಚಿತನಂತಿರುತ್ತಿದ್ದ ಆತ ಕೊಠಡಿ ಒಳಗೆ ಸೇರಿಕೊಂಡು ಪುಸ್ತಕ ಓದುತ್ತಿದ್ದ. ಬೆಂಗಳೂರು, ದೆಹಲಿಯಲ್ಲದೆ ವಿದೇಶಕ್ಕೂ ತೆರಳಿದ್ದ. ಪದೇ ಪದೇ ಬೆಂಗಳೂರಿಗೆ ಅಂತ ಹೇಳಿ ಹೋಗುತ್ತಿದ್ದ. ಮನೆಗೆ ಬರುತ್ತಿದ್ದ ಪೋಸ್ಟ್ ಗಳನ್ನ ಬೇರೆ ವಿಳಾಸಕ್ಕೆ ವರ್ಗಾಯಿಸಿದ್ದ. ಬೆಂಗಳೂರಿನಲ್ಲಿ ತಾನು ಉಳಿದುಕೊಂಡಿದ್ದ ಕೊಠಡಿಗೆ ಬರುವಂತೆ ನೋಡಿಕೊಂಡಿದ್ದ ಎಂಬ ಮಾಹಿತಿ ಕುಟುಂಬಸ್ಥರಿಂದ ತಿಳಿದು ಬಂದಿದೆ.

ಮನೋರಂಜನ್ ಫಸ್ಟ್ ಕ್ಲಾಸ್ ಸ್ಟೂಡೆಂಟ್ ಆಗಿದ್ದು  ಮೈಸೂರಿನಲ್ಲಿಯೇ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದನು. ಸೆಂಟ್ ಜೋಸೆಫ್ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ, ಮರಿಮಲ್ಲಪ್ಪ ಶಾಲೆಯಲ್ಲಿ ಪಿಯು ಶಿಕ್ಷಣ, ಬೆಂಗಳೂರಿನ ಬಿಐಟಿಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದನು. ಸಿವಿಲ್ ಓದು ಅಂದರೂ ಕಂಪ್ಯೂಟರ್ ಸೈನ್ಸೇ ಓದಬೇಕೆಂದು ಹಠ ಹಿಡಿದಿದ್ದನಂತೆ.

Key words: Lok Sabha-attack –case -Internal Security Force officials-Mysore