‘ನಿಮ್ಮ ಮನೆ ನಿಮ್ಮ ನಕ್ಷೆಗೆ ಲೈಸೆನ್ಸ್’ ಪ್ರಕ್ರಿಯೆಗೆ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ

ಮೈಸೂರು,ಡಿಸೆಂಬರ್,17,2020(www.justkannada.in) : “ನಿಮ್ಮ ಮನೆ ನಿಮ್ಮ ನಕ್ಷೆಗೆ ಲೈಸೆನ್ಸ್” ಪ್ರಕ್ರಿಯೆಗೆ ಮೈಸೂರು  ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.Teachers,solve,problems,Government,bound,Minister,R.Ashokಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿ, ಇನ್ನು ಮುಂದೆ ಅರ್ಜಿ ಸಲ್ಲಿಸಿದ ದಿನದಂದೇ ಮನೆ ನಿರ್ಮಾಣದ ಪ್ರಾರಂಭಿಕ ಲೈಸೆನ್ಸ್ ಪಡೆಯಬಹುದು ಎಂದರು.

ಮುಡಾದಿಂದ ನಿವೇಶನದಾರಿಗೆ ಅನುಕೂಲ ಕಲ್ಪಿಸುವ ವಿನೂತನ ಕಾರ್ಯಕ್ರಮವಾಗಿದೆ. ಈ ಮೊದಲು ಅರ್ಜಿ ಸಲ್ಲಿಸಿ ಬಹಳಷ್ಟು ದಿನಗಳ ವರೆಗೆ ಕಾಯಬೇಕಿತ್ತು. ಪದೇ ಪದೇ ಮುಡಾ ಕಚೇರಿಗೆ ಅಲೆಯುವ ಪರಿಸ್ಥಿತಿ ಇತ್ತು. ಆದರೆ, ಇದೀಗ ಅರ್ಜಿ ಸಲ್ಲಿಸಿದ ದಿನದಂದೇ ಲೈಸೆನ್ಸ್ ಸಿಗಲಿದೆ ಎಂದು ಹೇಳಿದರು.

Your,home,yours,Licensing,process,map,Minister,S.T. Somashekhar,drivingಈ ಸಂದರ್ಭ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಶಾಸಕ ಎಲ್.ನಾಗೇಂದ್ರ ಸೇರಿದಂತೆ ಮತ್ತಿತರ ಇದ್ದರು.

key words : Your-home-yours-Licensing-process-map-Minister-S.T. Somashekhar-driving