Thursday, September 17, 2026

BDA Apartments

ಮಹಿಳಾ ಬಾಕ್ಸಿಂಗ್‌ ಅರ್ಹತಾ ಟ್ರಯಲ್ಸ್‌: ಗೆದ್ದು ಬೀಗಿದ ಮೇರಿಕೋಮ್… BDA JK_Adv BDA Adv
Home Front Page ಮಹಿಳಾ ಬಾಕ್ಸಿಂಗ್‌ ಅರ್ಹತಾ ಟ್ರಯಲ್ಸ್‌: ಗೆದ್ದು ಬೀಗಿದ ಮೇರಿಕೋಮ್…

ಮಹಿಳಾ ಬಾಕ್ಸಿಂಗ್‌ ಅರ್ಹತಾ ಟ್ರಯಲ್ಸ್‌: ಗೆದ್ದು ಬೀಗಿದ ಮೇರಿಕೋಮ್…

ಹೊಸದಿಲ್ಲಿ, ಡಿಸೆಂಬರ್ 28, 2019 (www.justkannada.in): ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಅವರು ಇಲ್ಲಿ ನಡೆದ ಮಹಿಳಾ ಬಾಕ್ಸಿಂಗ್ ಒಲಿಂಪಿಕ್ ಅರ್ಹತಾ ಟ್ರಯಲ್ಸ್ ನಲ್ಲಿ ನಿಖತ್ ಜರೀನ್ ರನ್ನು ಸೋಲಿಸಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್ ಪ್ರವೇಶವನ್ನು ಖಚಿತಪಡಿಸಿದ್ದಾರೆ.

ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೇರಿ ಕೋಮ್ ಅವರು ನಿಖತ್ ಜರೀನ್ ಅವರನ್ನು 9-1 ರ ಭಾರಿ ಅಂತರದಿಂದ ಗೆದ್ದು ಬೀಗಿದ್ದಾರೆ.

ಶುಕ್ರವಾರ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನ ಮೊದಲ ಪಂದ್ಯದಲ್ಲಿ ಮಾಜಿ ವಿಶ್ವ ಕಿರಿಯರ ಚಾಂಪಿಯನ್‌ ನಿಖತ್‌ ಜರೀನ್‌ ಹಾಲಿ ರಾಷ್ಟ್ರೀಯ ಚಾಂಪಿಯನ್‌ ಜ್ಯೋತಿ ಗುಲಿಯಾ ಅವರನ್ನು ಸೋಲಿಸಿದ್ದರು. ಮತ್ತೊಂದು ಪಂದ್ಯದಲ್ಲಿ ಅನುಭವಿ ಬಾಕ್ಸರ್‌, ಒಲಿಂಪಿಯನ್‌ ಮೇರಿ ಕೋಮ್‌ ಎದುರಾಳಿ ರಿತು ಗ್ರೆವಾಲ್‌ ಅವರನ್ನು ಮಣಿಸುವ ಮೂಲಕ ಫೈನಲ್‌ ಹಂತ ಪ್ರವೇಶಿಸಿದರು.