ಅಸ್ಸಾಂ ಬೆಡಗಿಯೊಂದಿಗೆ ಸಪ್ತಪದಿ ತುಳಿಯಲು ಸಜ್ಜಾದ ‘ಆ ದಿನಗಳ’ ಚೇತನ್

ಬೆಂಗಳೂರು, ಡಿಸೆಂಬರ್ 28, 2019 (www.justkannada.in): ನಟ ಚೇತನ್ ಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಸುಮಾರು ಎರಡು ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗಿಯನ್ನು ಶಾಸ್ತ್ರೋಕ್ತವಾಗಿ ಬರ ಮಾಡಿಕೊಳ್ಳಲು ಅವರು ಸಜ್ಜಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೇತನ್, ‘ಮದುವೆಯಾಗುತ್ತಿರುವುದು ಸತ್ಯ. ಅಂದ ಹಾಗೆ ನಮ್ಮದು ಲವ್ ಮ್ಯಾರೇಜ್. ಅವರದ್ದು ಅಸ್ಸಾಂ, ಹೀಗಾಗಿ ನಾನೇ ಕನ್ನಡ ಭಾಷೆ ಕಲಿಸಿದ್ದೀನಿ. ನನ್ನಂತೆಯೇ ಅವರೂ ಸಹ ಸಮಾಜದ ಮೇಲೆ ಕಾಳಜಿ ಹೊಂದಿದ್ದಾರೆ. ನಾವು ಮದುವೆಯಾದರೆ ಸರಳವಾಗಿ ಮದುವೆಯಾಗುತ್ತೇವೆ’ ಎಂದಿದ್ದಾರೆ.

ಸದ್ಯ ಲವ್ ನಲ್ಲಿ ಬಿದ್ದಿರುವ ಚೇತನ್ ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಸರಳವಾಗಿ ಅನಾಥಾಶ್ರಮದಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ಯಾರು ಆ ಹುಡುಗಿ ಎನ್ನುವುದನ್ನು ಹೇಳಿಲ್ಲ.