ಕುಡಿದ ಮತ್ತಿನಲ್ಲಿ ಕಿತ್ತಾಟಿಕೊಂಡ ನಟಿ ಸಂಜನಾ-ವಂದನಾ

ಬೆಂಗಳೂರು, ಡಿಸೆಂಬರ್ 28, 2019 (www.justkannada.in): ಹೋಟೆಲ್ ಒಂದರಲ್ಲಿ ನಟಿ ಸಂಜನಾ ಗಲ್ರಾನಿ ಹಾಗೂ ನಿರ್ಮಾಪಕಿ ವಂದನಾ ಜೈನ್ ನಡುವೆ ಗಲಾಟೆ ನಡೆದಿದೆ.

ಹೋಟೆಲ್ ನಲ್ಲಿ ಸಂಜನಾ ಹಾಗು ವಂದನಾ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು, ಅದು ಇಬ್ಬರೂ ಕಿತ್ತಾಡಿಕೊಳ್ಳುವವರೆಗೆ ವಿಪರೀತಕ್ಕೆ ಹೋಗಿದೆ.

ಈ ಕುರಿತು ನಿರ್ಮಾಪಕಿ ವಂದನಾ ಜೈನ್, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಂಜನಾ ತನ್ನ ಮೇಲೆ ವಿಸ್ಕಿ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.