Thursday, August 6, 2026

BDA Apartments

Home Front Page ನಾವಂತೂ ರಾಜ್ಯ ಸರ್ಕಾರವನ್ನು ಬೀಳಿಸೋಕೆ ಹೋಗಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ

ನಾವಂತೂ ರಾಜ್ಯ ಸರ್ಕಾರವನ್ನು ಬೀಳಿಸೋಕೆ ಹೋಗಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಅಕ್ಟೋಬರ್,20,2020 : ಬಿಎಸ್ ವೈ ಇಳಿಸಲು ಬಿಜೆಪಿಯಲ್ಲಿ ದೊಡ್ಡ ಚರ್ಚೆ ನಡೆದಿದೆ. ನಾವಂತೂ ರಾಜ್ಯ ಸರರ್ಕಾರವನ್ನು ಬೀಳಿಸೋಕೆ ಹೋಗಲ್ಲ ಎಂದು ಬಾದಾಮಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಗಿ ಹೇಳಿದ್ದಾರೆ.jk-logo-justkannada-logo

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಮಾರಂಭವೊಂದರಲ್ಲಿ ಬಿಎಸ್ ವೈ ಮುಖ್ಯಮಂತ್ರಿಯಾಗಿ ಬಹಳ ದಿನ ಇರುವುದಿಲ್ಲ. ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗೋದು ಎಂದು ಹೇಳಿದ್ದರು. ಈ ಹೇಳಿಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಸಿದ್ದು ಈ ರೀತಿ ಹೇಳಿದರು.

ಯಾವಾಗ ಇಳಿಸ್ತಾರೆ, ಯಾರನ್ನ ಸಿಎಂ ಮಾಡ್ತಾರೆ ಗೊತ್ತಿಲ್ಲ

ಸಿಎಂ ಬದಲಾವಣೆ ಬಗ್ಗೆ ಶಾಸಕ ಯತ್ನಾಳ್ ಹೇಳಿಕೆ ವಿಚಾರ ಸಂಬಂಧಿಸಿ ಬಿಎಸ್ ವೈ ಇಳಿಸಲು ಬಿಜೆಪಿಯಲ್ಲಿ ದೊಡ್ಡ ಚರ್ಚೆ ನಡೆದಿದೆ. ನಾವಂತೂ ರಾಜ್ಯ ಸರ್ಕಾರವನ್ನು ಬೀಳಿಸೋಕೆ ಹೋಗಲ್ಲ. ಬಿಎಸ್ ವೈ ಇಳಿಸುವ ಬಗ್ಗೆ ಚರ್ಚೆ ನಡೆದಿರುವುದು ನಿಜ. ಯಾವಾಗ ಇಳಿಸ್ತಾರೆ, ಯಾರನ್ನ ಸಿಎಂ ಮಾಡ್ತಾರೆ ಗೊತ್ತಿಲ್ಲ ಎಂದಿದ್ದಾರೆ.We,are,not,going,bring,down,state government,Siddaramaiah,irony

ಕರ್ನಾಟಕ ಅಂದ್ರೆ ಪ್ರಧಾನಿ ಮೋದಿಗೆ ಮಲತಾಯಿ ಧೋರಣೆ

ಇನ್ನು ಪ್ರವಾಹ ಪರಿಹಾರ ಕುರಿತು ಮಾತನಾಡಿ, ಪರಿಹಾರಕ್ಕೆ ಕೇಂದ್ರ ಸರ್ಕಾರ ಒಂದು ರೂ.ಕೊಟ್ಟಿಲ್ಲ. ರಾಜ್ಯ ಸರ್ಕಾರ ಕೂಡ ಒಂದು ರೂಪಾಯಿ ಖರ್ಚು ಮಾಡಿಲ್ಲ. ಕರ್ನಾಟಕ ಅಂದ್ರೆ ಪ್ರಧಾನಿ ಮೋದಿಗೆ ಮಲತಾಯಿ ಧೋರಣೆ. ಕಳೆದ ಬಾರಿ ಭೀಕರ ಪ್ರವಾಹವಿತ್ತು. ಆ ಸಮಯದಲ್ಲೇ ಬಂದಿಲ್ಲ. ಈಗ ಮೋದಿ ಬರುತ್ತಾರಾ ಜನ ಅವರಿಗೆ ಪಾಠ ಕಲಿಸುತ್ತಾರೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

key words : We-are-not-going-bring-down-state government- Siddaramaiah-irony