ಮೈಸೂರು ಪ್ರವಾಸಿ ತಾಣ ನಿರ್ಬಂಧ ತೆರವು ಮತ್ತು ಡಿಸಿ ವರ್ಗಾವಣೆ ವಿಚಾರ: ಸರ್ಕಾರದ ವಿರುದ್ಧ ಎಂ. ಲಕ್ಷ್ಮಣ್ ವಾಗ್ದಾಳಿ…

ಮೈಸೂರು,ಅಕ್ಟೋಬರ್,20,2020(www.justkannada.in): ದಸರಾ ಸಂದರ್ಭದಲ್ಲಿ ಕೊರೋನಾ ಹರಡದಂತೆ ಜಿಲ್ಲಾಧಿಕಾರಿ ಮುನ್ನೆಚ್ಚರಿಕೆಯಾಗಿ ಪ್ರವಾಸಿ ತಾಣಗಳಿಗೆ ಹೇರಿದ್ದ ನಿರ್ಬಂಧವನ್ನು ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ತೆರವುಗೊಳಿಸಿದ್ದಾರೆ‌. ಇದರಿಂದ ಮೈಸೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾದರೆ ಅದಕ್ಕೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಹೊಣೆಯಾಗಲಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಎಂದು ಹೇಳಿದ್ದಾರೆ.

jk-logo-justkannada-logo

ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ  ಎಂ. ಲಕ್ಷ್ಮಣ್, ಕೊರೋನಾ ವೈರಸ್ ವಿಚಾರದಲ್ಲೂ ರಾಜ್ಯ ಸರ್ಕಾರ ದ್ವಂಧ್ವ ನೀತಿ ಅನುಸರಿಸುತ್ತಿದೆ‌.  ದಸರಾ ಸಂದರ್ಭದಲ್ಲಿ ಕೊರೊನಾ ಹರಡದಂತೆ ಜಿಲ್ಲಾಧಿಕಾರಿ ಮುನ್ನೆಚ್ಚರಿಕೆಯಾಗಿ ಪ್ರವಾಸಿ ತಾಣಗಳಿಗೆ ಹೇರಿದ್ದ ನಿರ್ಬಂಧವನ್ನು ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ತೆರವುಗೊಳಿಸಿದ್ದಾರೆ‌. ಪರಿಣಾಮ ಕಳೆದ  ನಾಲ್ಕು ದಿನಗಳಿಂದ ಸುಮಾರು 2 ಲಕ್ಷ ಜನರು ಬಂದು ಹೋಗಿದ್ದಾರೆ. ಅವರಿಂದ ಮೈಸೂರಿಗರಿಗೆ ಕೊರೋನಾ ಹರಡುವ ಜೊತೆಗೆ ಮೈಸೂರಿನಿಂದ ಕೊರೋನಾ ಸೋಂಕು ಕೊಂಡೊಯ್ದಿದ್ದಾರೆ. ಇದರಿಂದ ಮೈಸೂರಿನಲ್ಲಿ ಕೊರೋನಾ ಸೋಂಕು ಹೆಚ್ಚಾದರೆ ಅದಕ್ಕೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಹೊಣೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದೇ ತಿಂಗಳಿಗೆ ಮೂರು ಜಿಲ್ಲಾಧಿಕಾರಿಗಳ ಬದಲಾವಣೆ: ಯಾವ ಪುರುಷಾರ್ಥಕ್ಕೆ….

ಇದೇ ವೇಳೆ ಮೈಸೂರು ಜಿಲ್ಲಾಧಿಕಾರಿ ಬದಲಾವಣೆ ಬಗ್ಗೆ ಸರ್ಕಾರದ ವಿರುದ್ದ ಗುಡುಗಿದ ಎಂ.ಲಕ್ಷ್ಮಣ್, ಮೈಸೂರಿನಲ್ಲಿ ಒಂದೇ ತಿಂಗಳಿಗೆ ಮೂರು ಜನ ಜಿಲ್ಲಾಧಿಕಾರಿಗಳನ್ನ ಬದಾಲಾಯಿಸಿದ್ದೀರಿ. ಯಾವ ಪುರುಷರ್ಥಾಕ್ಕೆ ಬದಲಾಯಿಸಿದ್ದೀರಿ.? ಯಾವ ಕಾರಣಕ್ಕೆ 29 ದಿನಕ್ಕೆ ಬಿ. ಶರತ್ ಅವರನ್ನ ವರ್ಗಾವಣೆ ಮಾಡಿದ್ದು.? ಎಂದು ಪ್ರಶ್ನಿಸಿದರು.mysore-tourist-dc-transfer-issues-kpcc-spokeperson-m-laxman-govrnament

ಈಗಿರುವ ಜಿಲ್ಲಾಧಿಕಾರಿಗಳು ಯಾರನ್ನ ಕೇಳುದ್ರೂ ಬಿಟ್ರೋ ಗೊತ್ತಿಲ್ಲ ಎಲ್ಲಾ ಪ್ರವಾಸಿ ತಾಣಗಳನ್ನು ಏಕಾಏಕಿ ಬಂದ್ ಮಾಡಿ ಬಿಟ್ರು.ಮುಖ್ಯಮಂತ್ರಿಗಳು, ಜಿಲ್ಲಾಮಂತ್ರಿಗಳಿಗೆ ಆದೇಶ ನೀಡಿ ಅದನ್ನ ಕ್ಯಾನ್ಸಲ್  ಮಾಡುತ್ತಾರೆ. ಮೈಸೂರಿನ ಸಂಸ್ಕೃತಿಗೆ ಹೊಂದಿಕೊಂಡು ಹೋಗುವ ಕೆಲಸವನ್ನ ಹೊಸ ಜಿಲ್ಲಾಧಿಕಾರಿಗಳು,ಹೊಸ ಜಿಲ್ಲಾ ಮಂತ್ರಿಗಳು ಮಾಡಬೇಕು. ಅದನ್ನ ಬಿಟ್ಟು ತಮ್ಮ ಪ್ರತಿಷ್ಟೆಗೆ ಕೆಲಸ ಮಾಡಿದ್ರೆ, ಮೈಸೂರಿನ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಜನರಿಗೆ ಗೊಂದಲ ಸೃಷ್ಟಿ ಮಾಡುವ ಕೆಲಸವನ್ನ ಸರ್ಕಾರ ಮತ್ತು ಜಿಲ್ಲಾಡಳಿತ ಮಾಡುತ್ತದೆ ಎಂದು ಎಂ. ಲಕ್ಷ್ಮಣ್ ಹರಿಹಾಯ್ದರು.

Key words: Mysore- Tourist- DC- Transfer –Issues-KPCC-Spokeperson-M.Laxman -govrnament