ಫೆಲೋಶಿಪ್ ನೀಡುವಂತೆ ಆಗ್ರಹಿಸಿ ಮೈಸೂರು ವಿವಿ ಪಿಎಚ್ ಡಿ ವಿದ್ಯಾರ್ಥಿಗಳಿಂದ ಪ್ರತಿಭಟನೆ…

ಮೈಸೂರು,ಫೆಬ್ರವರಿ,12,2021(www.justkannada.in): ಫೆಲೋಶಿಪ್ ನೀಡುವಂತೆ ಆಗ್ರಹಿಸಿ ಮೈಸೂರು ವಿಶ್ವ ವಿದ್ಯಾನಿಲಯದ ಪಿಎಚ್ ಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.jk

ವಿವಿಯ ಕ್ರಫರ್ಡ್ ಹಾಲ್ ಬಳಿ ಪಿ.ಎಚ್. ಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಫೆಲೋಶಿಪ್ ನೀಡುವಂತೆ ಆಗ್ರಹಿಸಿದರು. ಕಳೆದ ಕೆಲ ತಿಂಗಳಿಂದ ಫೆಲೋಶಿಪ್ ನಿಂದ ವಂಚಿತರಾಗಿರುವ ಕೆಲ ವಿದ್ಯಾರ್ಥಿಗಳು ಧರಣಿ ನಡೆಸಿದರು.Protest - Mysore university-PhD- students- demanding- fellowship

ವಿವಿಯ ಎಲ್ಲಾ ಪಿ.ಎಚ್.ಡಿ ವಿದ್ಯಾರ್ಥಿಗಳಿಗೂ ಒಂದೇ ನಿಯಮ ಮಾಡಿ. ಕೆಲ ವಿದ್ಯಾರ್ಥಿಗಳಿಗೆ ಮಾತ್ರ  ಫೆಲೋಶಿಪ್ ಬರುತ್ತಿದೆ. ವಿವಿಯಲ್ಲಿ ಎಲ್ಲರೂ ಶ್ರೀಮಂತರ ಮಕ್ಕಳಿರುವುದಿಲ್ಲ. ನಾವೆಲ್ಲರೂ ಬಡ ವಿದ್ಯಾರ್ಥಿಗಳು, ನಮಗೆ ಫೆಲೋಶಿಪ್ ನಿಲ್ಲಿಸಿದರೆ ಹೇಗೆ ? ಈ ಕೂಡಲೇ ನಮ್ಮ ಸಮಸ್ಯೆ ಬಗೆಹರಿಸಿ ನ್ಯಾಯ ಕೊಡಿ ಎಂದು ಸ್ಥಳಕ್ಕೆ ಆಗಮಿಸಿದ ಕುಲಸಚಿವ ಶಿವಪ್ಪ ಮುಂದೆ ಪ್ರತಿಭಟನಕಾರರು ಮನವಿ ಮಾಡಿದರು.

Key words: Protest – Mysore university-PhD- students- demanding- fellowship