ಇದು ಯುದ್ಧ ಮಾಡುವ ಸಮಯ ಅಲ್ಲ: ಮಾತುಕತೆ ಮೂಲಕ ಶಾಂತಿ ಕಾಪಾಡಬೇಕಿದೆ -ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…

ಬೆಂಗಳೂರು,ಜೂ,18,2020(www.justkannada.in):  ಭಾರತ- ಚೀನಾ ನಡುವೆ ಗಡಿಯಲ್ಲಿ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಇದು ಯುದ್ಧ ಮಾಡುವ ಸಮಯವಲ್ಲ. ಮಾತುಕತೆ ಮೂಲಕ ಶಾಂತಿ ಕಾಪಾಡಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ  ಹೆಚ್.ಡಿ ಕುಮಾರಸ್ವಾಮಿ, ಕಳೆದ ಹಲವು ದಿನಗಳಿಂದ ಗಡಿ ಭಾಗದಲ್ಲಿ ಭಾರತ- ಚೀನಾ ನಡುವೆ ಸಂಘರ್ಷ ಆಗ್ತಿದೆ. ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ. ಭಾರತಕ್ಕೆ ಇದು ಸಂಕಷ್ಟದ ಸಮಯ. ಕೊರೋನಾದಿಂದ ನಮ್ಮ‌‌ ದೇಶದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಹೀಗಾಗಿ ಇದು ಯುದ್ಧ ಮಾಡುವ ಸಮಯ ಅಲ್ಲ. ಮಾತುಕತೆ ಮುಖಾಂತರ ಶಾಂತಿ ಕಾಪಾಡಬೇಕಿದೆ. ಇಂಥ ಸಂದರ್ಭದಲ್ಲಿ ವೀರಾವೇಶದ ಮಾತಗಳನ್ನ ಆಡಬಾರದು. ಆದಷ್ಟು ಮಾತುಕತೆ ಮುಖಾಂತರ ಸಮಸ್ಯೆ ಬಗೆಹರಿಸಕೊಳ್ಳಬೇಕು. ಹುತಾತ್ಮರಾದ ಯೋಧರಿಗೆ ಹೆಚ್ಚಿನ ನೆರವು ಸರ್ಕಾರಗಳು ನೀಡಬೇಕು ಇದು ನನ್ನ ಸಲಹೆ ಎಂದರು.

ಚೀನಾ ವಸ್ತುಗಳ ಬಹಿಷ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಪ್ರಚಾರ ಮಾಡಿಕೊಂಡು ಯಾಕೆ ಮಾಡಬೇಕು? ನಮ್ಮ ಸಾಮರ್ಥ್ಯವನ್ನ ಮೊದಲು ಹೆಚ್ಚಿಸಿಕೊಳ್ಳಬೇಕು. ಪ್ರತಿನಿತ್ಯ ಚೀನಾ ವಸ್ತುಗಳ ಮೇಲೆ ಜನರು ಅವಲಂಬಿತರಾಗಿದ್ದಾರೆ. ನಮ್ಮಲ್ಲಿ‌ ವಸ್ತುಗಳ ಉತ್ಪಾದನೆ ಮಾಡಿಕೊಳ್ಳಲು ಮೊದಲು ಗಮನ ಕೊಡಬೇಕು. ಪ್ರಚಾರಕ್ಕಾಗಿ ಶೋ ಮಾಡಿದ್ರೆ ಗೆಲುವು ಸಾಧ್ಯ ಇಲ್ಲ. ಇಂತಹ ವಿಚಾರದಲ್ಲಿ ಸೈಲೆಂಟಾಗಿ ನಮ್ಮ‌ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.war-india-china-conflict-peace-former-cm-hd-kumaraswamy

ವಿಧಾನ ಪರಿಷತ್ ಜೆಡಿಎಸ್ ಅಭ್ಯರ್ಥಿ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಿಂದ ಗೋವಿಂದರಾಜು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಕೋಲಾರ ಮೂಲದ ಸಾಮಾನ್ಯ ಕಾರ್ಯಕರ್ತ ಅವರು. ಕೋಲಾರ ಭಾಗದಲ್ಲಿ ಪಕ್ಷದ ಹಿತದೃಷ್ಟಿಯಿಂದ ಅವರಿಗೆ ಟಿಕೆಟ್ ನೀಡಲಾಗಿದೆ. ಚಿಕ್ಕಬಳ್ಳಾಪುರ- ಕೋಲಾರ ಭಾಗದಲ್ಲಿ ಪಕ್ಷ ಸಂಘಟನೆ ಮತ್ತಷ್ಟು ಶಕ್ತಿ ಸಿಗಲಿದೆ. ಪಕ್ಷದ ಹಿತದೃಷ್ಟಿಯಿಂದ ಅವರಿಗೆ ನಾವು ಟಿಕೆಟ್ ನೀಡಿದ್ದೇವೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

Key words:  war-india- China- conflict-Peace -Former CM -HD Kumaraswamy.