“ಕೋಡಿಹಳ್ಳಿ ಕಡೆಗೆ ಸಾರಿಗೆ ನೌಕರರು ಹೋದರೆ ಅನ್ಯಾಯವಾಗುವುದು ನೌಕರರಿಗೆ” : ಸಚಿವ ಕೆ.ಎಸ್ ಈಶ್ವರಪ್ಪ

ಬೆಂಗಳೂರು,ಏಪ್ರಿಲ್,08,2021(www.justkannada.in) : ಕೋಡಿಹಳ್ಳಿ ಕಡೆಗೆ ಸಾರಿಗೆ ನೌಕರರು ಹೋದರೆ ಅನ್ಯಾಯವಾಗೋದು ನೌಕರರಿಗೇ ಅನ್ನುವುದನ್ನು ಪ್ರತಿಭಟನಾಕಾರರು ಅರ್ಥ ಮಾಡಿಕೊಳ್ಳಬೇಕು. ಕೋಡಿಹಳ್ಳಿಯ ಮೊಂಡುವಾದವನ್ನು ಹೇಗೆ ಮಟ್ಟ ಹಾಕಬೇಕೆಂದು ಸರ್ಕಾರಕ್ಕೆ ಗೊತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Illegally,Sand,carrying,Truck,Seized,arrest,driver

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಸ್ತೆ ಸಾರಿಗೆ ನೌಕರರ ಎಲ್ಲ ಬೇಡಿಕೆಯನ್ನು ಈಡೇರಿಸುವುದಕ್ಕೆ ಸಾಧ್ಯವೇ ಇಲ್ಲ. ನೌಕರರು ಕೋಡಿಹಳ್ಳಿ ಚಂದ್ರಶೇಖರ್ ನಾಯಕತ್ವವನ್ನು ಬಿಟ್ಟು, ಸರ್ಕಾರದ ಜೊತೆ ಮಾತುಕತೆ ನಡೆಸಲಿ. ಕೋಡಿಹಳ್ಳಿ ಸರ್ವಾಧಿಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯೋದಿಲ್ಲ. ಕೋಡಿಹಳ್ಳಿ ಉದ್ದೇಶ ಕೇವಲ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಕುಂಠಿತಗೊಳಿಸುವುದಾಗಿದೆ ಎಂದು ಕಿಡಿಕಾರಿದರು.

ಸಾರಿಗೆ ನೌಕರರ ಬೇಡಿಕೆ ಒಂದು ಪರ್ಸೆಂಟ್ ಕೂಡಾ ನ್ಯಾಯ ಸಮ್ಮತವಾಗಿಲ್ಲ. ಸರ್ಕಾರ ಈ ಬೇಡಿಕೆಯನ್ನು ಒಪ್ಪುವುದಕ್ಕೂ ಸಾಧ್ಯವಿಲ್ಲ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಿದರೆ ಎಲ್ಲಾ ಇಲಾಖೆಗಳ ನೌಕರರೂ ಇದೇ ಮನವಿಯನ್ನು ಮಾಡುತ್ತಾರೆ. ಅದು ಖಂಡಿತವಾಗಿಯೂ ಸಾಧ್ಯವಿಲ್ಲ ಎಂದಿದ್ದಾರೆ.

Kodihalli-Transportation-Employees-not-unfair-employees-Minister-K.S.Eshwarappa

ಸಾರಿಗೆ ನೌಕರರ ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆಯಾದರೆ ಸರ್ಕಾರ ಪರ್ಯಾಯ ವ್ಯವಸ್ಥೆಯನ್ನು ಮಾಡುತ್ತೇವೆ. ಜನರಿಗೆ ತೊಂದರೆಯಾದಾಗ ಸರ್ಕಾರ ಸುಮ್ಮನೆ ಕೂರಲು ಸಾಧ್ಯವೇ ಇಲ್ಲ. ಸಾರಿಗೆ ನೌಕರರು ಕೋಡಿಹಳ್ಳಿ ನಾಯಕತ್ವವನ್ನು ಬಿಟ್ಟು ಬಂದು ರಾಜ್ಯ ಸರ್ಕಾರದ ಜೊತೆ ಮಾತುಕತೆ ನಡೆಸಬಹುದೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಮನವಿ ಮಾಡಿದ್ದಾರೆ.

ENGLISH SUMMARY….

If Transport Dept. employees go to Kodihalli they will be the losers: Minister K.S. Eshwarappa
Bengaluru, Apr. 08, 2021 (www.justkannada.in): “If the Transport Department employees go to Kodihalli Chandrashekar, they will be the ones who will get injustice. The protestors should understand it first. The State Government knows how to handle him and his blunt arguments,” opined Rural Development Minister K.S. Eshwarappa.
Speaking to the media persons today in Bengaluru he said, “it is impossible to solve all the problems of the transport department employees. They should come out of the leadership of their leader Kodihalli Chandrashekar and hold discussions with the government. Kodihalli Chandrashekar’s dictatorship can’t be accepted in a democracy. His objective is only to weaken the economy of the State.”
“The Transport Department employees demands are not even one percent fair. The government cannot agree to their demands. If their services are regularized all the other employees will also appeal for the same. Hence, it is not possible,” he added.
On the occasion, he also informed that the government would make alternative arrangements for the benefit of the passenger. “The government cannot keep quiet when people are facing a problem. The protesting employees can approach the government and have discussions without their leader,” he said.
Keywords: Minister K.S. Eshwarappa/ Transport Department employees/ Kodihalli Chandrashekar/ employees will be the losers/ discuss with the government
————————–

key words : Kodihalli-Transportation-Employees-not-unfair-employees-Minister-K.S.Eshwarappa