ವಿಧಾನ ಪರಿಷತ್ ಚುನಾವಣೆ: ಜೆಡಿಎಸ್ ಅಭ್ಯರ್ಥಿಯಾಗಿ ಗೋವಿಂದರಾಜು ನಾಮಪತ್ರ ಸಲ್ಲಿಕೆ…

ಬೆಂಗಳೂರು,ಜೂ,18,2020(www.justkannada.in):  ಜೂನ್ 29 ರಂದು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿಯಾಗಿ ಇಂಚರ ಗೋವಿಂದರಾಜು ನಾಮಪತ್ರ ಸಲ್ಲಿಕೆ ಮಾಡಿದರು.

ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಇಂಚರ ಗೋವಿಂದರಾಜು ಅವರು ಇಂದು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಈ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಉಪ ಸಭಾದ್ಯಕ್ಷ ಕೃಷ್ಣರೆಡ್ಡಿ, ಕೋಲಾರದ ಶಾಸಕರಾದ ಶ್ರೀನಿವಾಸ ಗೌಡ ಅವರು ಉಪಸ್ಥಿತರಿದ್ದರು.legislative-council-election-jds-candidate-govindaraju-nomination

ಗೋವಿಂದರಾಜು ಅವರು ಕೋಲಾರ ಮೂಲದ ಉದ್ಯಮಿಯಾಗಿದ್ದಾರೆ. ಗೋವಿಂದರಾಜು ಅವರಿಗೆ ಜೆಡಿಎಸ್ ನಿಂದ ವಿಧಾನಪರಿಷತ್ ಟಿಕೆಟ್ ಸಿಕ್ಕ ಹಿನ್ನೆಲೆ ಟಿಕೆಟ್ ಆಕಾಂಕ್ಷಿಗಳಾಗಿದ್ದ ಕುಪೇಂದ್ರ ರೆಡ್ಡಿ ಹಾಗೂ ಶರವಣಗೆ ಅವಕಾಶ ತಪ್ಪಿದೆ.

Key words: legislative Council –election-JDS candidate- Govindaraju -nomination