Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಮೆಲ್ಬರ್ನ್ ರಸ್ತೆಗಳಿಗೆ ಸಚಿನ್, ಕಪಿಲ್, ಕೊಹ್ಲಿ ಹೆಸರು ನಾಮಕರಣ

ಮೆಲ್ಬರ್ನ್ ರಸ್ತೆಗಳಿಗೆ ಸಚಿನ್, ಕಪಿಲ್, ಕೊಹ್ಲಿ ಹೆಸರು ನಾಮಕರಣ

ಮೆಲ್ಬರ್ನ್, ಜೂನ್ 18, 2020 (www.justkannada.in): ಭಾರತ ಕ್ರಿಕೆಟ್‌ ತಂಡದ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌, ಕಪಿಲ್‌ ದೇವ್‌, ವಿರಾಟ್‌ ಕೊಹ್ಲಿಯ ಹೆಸರನ್ನು ಮೆಲ್ಬರ್ನ್ ನಗರದ ರಸ್ತೆಗಳಿಗೆ ಇಡಲಾಗಿದೆ.

ಮೆಲ್ಬರ್ನ್ ನಗರದ ರಾಕ್‌ಬ್ಯಾಂಕ್‌ ಉಪ ನಗರದಲ್ಲಿ ಅಭಿವೃದ್ಧಿಪಡಿಸುತ್ತಿರುವ ಹೊಸ ಹೌಸಿಂಗ್‌ ಎಸ್ಟೇಟ್‌ನ ಪ್ರಮುಖ ಬೀದಿಗಳಿಗೆ ಈ ಮೂವರ ಹೆಸರು ನಾಮಕರಣ ಮಾಡಲಾಗುತ್ತಿದೆ.

ಆಸ್ಟ್ರೇಲಿಯದಲ್ಲಿ ನೆಲೆಸಿರುವ ಭಾರತೀಯ ಮೂಲದವರನ್ನು ಸೆಳೆಯಲು ಪ್ರಮುಖ ಬೀದಿಗಳಿಗೆ ಭಾರತ ಕ್ರಿಕೆಟ್‌ ಮಾಂತ್ರಿಕರ ಹೆಸರನ್ನು ಇಡಲಾಗಿದೆ ಎನ್ನಲಾಗಿದೆ. “ತೆಂಡೂಲ್ಕರ್‌ ಡ್ರೈವ್‌’, ‘ಕೊಹ್ಲಿ ಕ್ರೆಸೆಂಟ್‌’, ‘ದೇವ್‌ ಟೆರೆಸ್‌’ ಎಂದು ಬೀದಿಗಳಿಗೆ ಹೆಸರಿಡಲಾಗಿದೆ.