ಕೊರೊನಾ ನಂತರ ಮೊದಲ ಕ್ರಿಕೆಟ್! ಜೂ. 25ರಿಂದ ಲಂಕಾದಲ್ಲಿ ಟಿ-10 ಕ್ರಿಕೆಟ್‌ ಲೀಗ್‌

ಕೊಲಂಬೊ, ಜೂನ್ 18, 2020 (www.justkannada.in): ಅನುರಾಧಾಪುರದಲ್ಲಿ ಜೂ. 25ರಿಂದ ಟಿ10 ಕ್ರಿಕೆಟ್‌ ಲೀಗ್‌ ನಡೆಯಲಿದ್ದು, ಇದರಲ್ಲಿ ಲಂಕೆಯ ಬಹಳಷ್ಟು ಆಟಗಾರರು ಪಾಲ್ಗೊಳ್ಳಲಿದ್ದಾರೆ.

ಕೋವಿಡ್-19 ಲಾಕ್‌ಡೌನ್‌ ಬಳಿಕ ಶ್ರೀಲಂಕಾದಲ್ಲಿ ಮೊದಲ ಸಲ ಕ್ರಿಕೆಟ್‌ ಪಂದ್ಯಾವಳಿ ನಡೆಯಲಿದೆ.
8 ತಂಡಗಳ ನಡುವಿನ 12 ದಿನಗಳ ಈ ಟಿ10 ಕ್ರಿಕೆಟ್‌ ಪಂದ್ಯಾವಳಿ ನಡೆಯಲಿದೆ.

ಖ್ಯಾತನಾಮರಾದ ಆಜಂತ ಮೆಂಡಿಸ್‌, ಚಾಮರ ಸಿಲ್ವ, ನುವಾನ್‌ ಕುಲಶೇಖರ, ಅಸೇಲ ಗುಣರತ್ನ, ಧಮ್ಮಿಕ ಪ್ರಸಾದ್‌, ಸಚಿತ್ರ ಸೇನಾನಾಯಕೆ, ಚಾಮರ ಕಪುಗೆಡರ, ತಿಲನ್‌ ತುಷಾರ, ಇಶಾರ ಅಮರಸಿಂಘೆ ಮೊದಲಾದ ಶ್ರೀಲಂಕಾ ಆಟಗಾರರು ಆಡಲಿದ್ದಾರೆ.