ಅಲ್ಲು ಅರ್ಜುನ್ ಜೊತೆಗೆ ಸ್ಟೆಪ್ ಹಾಕಲು ರಶ್ಮಿಕಾ ರೆಡಿ!

ಬೆಂಗಳೂರು, ಜೂನ್ 18, 2020 (www.justkannada.in): ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆಗೆ ಸ್ಟೆಪ್ ಹಾಕಲು ರೆಡಿಯಾಗಿದ್ದಾರೆ ರಶ್ಮಿಕಾ!

ಹೌದು. ಸ್ಟಾರ್ ಡೈರೆಕ್ಟರ್ ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗುವ ಚಾನ್ಸ್ ಗಳಿಸಿದ್ದಾರೆ. ಹಳ್ಳಿ ಹುಡುಗಿ ಪಾತ್ರದಲ್ಲಿ ಅಲ್ಲು ಅರ್ಜುನ್ ಜತೆ ಮಿಂಚೋಕೆ ಕೊಡಗಿನ ಬೆಡಗಿ ರಶ್ಮಿಕಾ ರೆಡಿಯಾಗಿದ್ದಾರೆ.

ಅಂದಹಾಗೆ ಲಾಕ್​​ಡೌನ್​ನಿಂದ ರಿಲೀಫ್ ಸಿಕ್ಕಿರೋದ್ರಿಂದ ಚಿತ್ರದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಆರಂಭವಾಗ್ತಿದೆ. ಶೀಘ್ರವೇ ಚಿತ್ರ ತಂಡಕ್ಕೆ ರಶ್ಮಿಕಾ ಕೂಡ ಸೇರಿಕೊಳ್ಳಲಿದ್ದಾರೆ.