ವೋಟರ್ ಐಡಿ ಅಕ್ರಮ ಪ್ರಕರಣ: ಇಬ್ಬರು ಐಎಎಸ್ ಅಧಿಕಾರಿಗಳ ಅಮಾನತು ವಾಪಸ್.

ಬೆಂಗಳೂರು,ಡಿಸೆಂಬರ್,24,2022(www.justkannada.in): ವೋಟರ್ ಐಡಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ  ಇಬ್ಬರು ಐಎಎಸ್ ಅಧಿಕಾರಿಗಳ ಅಮಾನತು ಆದೇಶವನ್ನ ಸರ್ಕಾರ ವಾಪಸ್ ಪಡೆದಿದೆ.

ವೊಟರ್ ಐಡಿ ಅಕ್ರಮ  ಪ್ರಕರಣದಲ್ಲಿ ಬೆಂಗಳೂರು ನಗರ ಮಾಜಿ ಡಿಸಿ ಕೆ. ಶ್ರೀನಿವಾಸ್, ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅಮಾನತಾಗಿದ್ದರು. ಇದೀಗ ಈ ಇಬ್ಬರು ಅಮಾನತನ್ನ ಸರ್ಕಾರ ವಾಪಸ್ ಪಡೆದಿದ್ದು, ಅಧಿಕಾರಿಗಳ ಸ್ಥಳ ನಿಯೋಜನೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Voter ID- Case-Suspension – two- IAS- officers