ವರ್ಚ್ಯುವಲ್ ಟೆರೇಸ್ ಯೋಗ ಮಾಡಿ: ಮತ್ತೊಂದು ದಾಖಲೆ ನಿರ್ಮಿಸಲು ಸಹಕರಿಸಿ-ಮೈಸೂರು ಜನತೆಗೆ ಶಾಸಕ ಎಸ್.ಎ ರಾಮದಾಸ್ ಮನವಿ…

ಮೈಸೂರು,ಜೂ,17,2020(www.justkannada.in):  ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ,  ಈ ಬಾರಿ ವರ್ಚ್ಯುವಲ್ ಟೆರೇಸ್ ಯೋಗ ಮಾಡುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸುವಲ್ಲಿ ಸಹಕಾರ ನೀಡುವಂತೆ ಶಾಸಕ ಎಸ್.ಎ ರಾಮದಾಸ್ ಮೈಸೂರು ಜನತೆಗೆ ಮನವಿ ಮಾಡಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ವರ್ಚ್ಯುವಲ್ ಟೆರೇಸ್ ಯೋಗ ಕುರಿತು ಮಾಹಿತಿ ನೀಡಿದ ಶಾಸಕ ಎಸ್.ಎ ರಾಮದಾಸ್, ಅಂತರರಾಷ್ಟ್ರೀಯ ಯೋಗ ದಿನಾಚರಣೆ ಯೋಗಾಭ್ಯಾಸದಲ್ಲಿ ಮೈಸೂರು ಕಳೆದ 6 ವರ್ಷಗಳಿಂದ ನಿರಂತರವಾಗಿ ವಿಶ್ವ ದಾಖಲೆಗಳನ್ನು ಮಾಡುತ್ತಾ ಬಂದಿದೆ. ಇಂದು ಯೋಗವೆಂದರೆ ಮೈಸೂರು, ಮೈಸೂರೆಂದರೆ ಯೋಗವಾಗಿದೆ. ಮೈಸೂರು ಹಬ್ ಆಫ್ ಯೋಗ ವಾಗಿದೆ. ವಿಶ್ವದಾದ್ಯಂತ ಯೋಗ ಕಲಿಯಲು ಮೈಸೂರಿಗೆ ಬರುತ್ತಾರೆ. ಈ ಬಾರಿ ವಿಶ್ವ ಯೋಗ ದಿನದಂದು ಪ್ರಧಾನಿಯವರು ಮೈಸೂರಿಗೆ ಆಗಮಿಸುವ ನಿರೀಕ್ಷೆಯಿತ್ತು. ಆದರೆ ಕರೊನಾ ಭೀತಿಯಿಂದ ಈ ವರ್ಷ ಅದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇದೇ ಭಾನುವಾರ 7 ರಿಂದ 7.45 ರವರೆಗೆ ಮೈಸೂರಿನ ನಾಗರೀಕರು ಮನೆಯ ಟೆರೇಸ್ ನಲ್ಲೇ ವರ್ಚ್ಯುವಲ್ ಟೆರೇಸ್ ಯೋಗ ಮಾಡಬೇಕೆಂದು ಮನವಿ ಮಾಡಿದರು.virtual-terrace-yoga-mysore-mla-sa-ramadas

ಈ ಬಾರಿ ವರ್ಚ್ಯುವಲ್ ಟೆರೇಸ್ ಯೋಗ ಮಾಡುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸುವಲ್ಲಿ ಸಹಕಾರ ನೀಡುವಂತೆ ಶಾಶಕ ಎಸ್.ಎ ರಾಮದಾಸ್ ಮೈಸೂರಿನ ಜನತೆಯಲ್ಲಿ ಕೋರಿದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ಯೋಗ ಫೆಡರೇಷನ್ ಮತ್ತು ಜಿ. ಎಸ್. ಎಸ್ ಯೋಗ ಸಂಸ್ಥೆ ಮುಖ್ಯಸ್ಥ ಶ್ರೀಹರಿ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ರವಿಶಂಕರ್, ಮೈಸೂರು ಯೋಗ ಒಕ್ಕೂಟದ ಬಿ. ಪಿ. ಮೂರ್ತಿ, ಬಾಬಾ ರಾಮದೇವ್ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶಶಿಕುಮಾರ್, ಮೈಸೂರು ಯೋಗ ಸ್ಪೋರ್ಟ್ಸ್ ಫೌಂಡೇಷನ್ ನ ಗಣೇಶ್ ಕುಮಾರ್ ಉಪಸ್ಥಿತರಿದ್ದರು.

Key words: Virtual- Terrace- Yoga-mysore- MLA-SA Ramadas