ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ರಸ್ತೆಯಲ್ಲೇ ಕಾಡಾನೆ ಪ್ರತ್ಯಕ್ಷ: ಮುಂದೇನಾಯ್ತು…?

ಚಿಕ್ಕಮಗಳೂರು,ಜೂ,17,2020(www.justkannada.in):  ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ದೇವರಮನೆ ಸಮೀಪ ರಸ್ತೆಯಲ್ಲಿ ಕಾಡಾನೆ ಪ್ರತ್ಯೆಕ್ಷವಾಗಿ ಕಾರಿನಲ್ಲಿ ತೆರಳುತ್ತಿದ್ದವರು ಭಯಭೀತರಾದ ಘಟನೆ ನಡೆಯಿತು.

ರಸ್ತೆಯಲ್ಲಿ  ಪ್ರತ್ಯಕ್ಷವಾದ ಒಂಟಿಸಲಗ ರಸ್ತೆಯಲ್ಲಿ ಅಡ್ಡಲಾಗಿ ನಿಂತಿತ್ತು. ನಂತರ ರಸ್ತೆಯಲ್ಲಿಯೇ ಕೆಲದೂರ ನಡೆದು ಅಲ್ಲಿಂದ  ಕಾಡಿಗೆ ತೆರಳಿತು. ಇನ್ನು ಅಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದವರು ಕಾಡಾನೆ ಹೋಗುವವರೆಗೂ ಕಾರಿನಲ್ಲೇ ಕಾದು ಕುಳಿತ ಬಳಿಕ ತೆರಳಿದರು.

elephant- chikkamagalore-road-car

ಇಲ್ಲಿ ನಿರಂತರವಾಗಿ ಕಾಡಾನೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಸ್ಥಳೀಯರು ಭಯಭೀತರಾಗಿದ್ದು ಆತಂಕದಲ್ಲೇ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.

Key words: elephant- chikkamagalore-road-car