ಪೊಲೀಸ್ ಲೇಔಟ್ ನಲ್ಲಿ ರಸ್ತೆಗೆ ಹರಿಯುತ್ತಿರುವ ಕೊಳಚೆ ನೀರು: ದುರ್ವಾಸನೆಯಿಂದ ಬೇಸತ್ತ ಸ್ಥಳೀಯರು…

ಮೈಸೂರು,ಜೂ,17,2020(www.justkannada.in): ಅವೈಜ್ಞಾನಿಕ ಯುಜಿಡಿ ಕಾಮಗಾರಿಯಿಂದ ಕೊಳಚೆ ನೀರು ರಸ್ತೆಗೆ ಹರಿಯುತ್ತಿದ್ದು ಇದರಿಂದಾಗಿ ಸಮಾಜದ ಸಮಸ್ಯೆ ಬಗೆಹರಿಸುವ ಪೊಲೀಸರಿಗೆ ಸಂಕಷ್ಟ ಎದುರಾಗಿದೆ.

ಹೌದು, ಮೈಸೂರಿನ ಆಲನಹಳ್ಳಿ ಗ್ರಾ.ಪಂ ವ್ಯಾಪ್ತಿಯ ನೇತಾಜಿನಗರ ಪೊಲೀಸ್ ಲೇಔಟ್ ನಲ್ಲಿ ಅವೈಜ್ಞಾನಿಕ ಯುಜಿಡಿ ಕಾಮಗಾರಿಯಿಂದ ನೀರು ರಸ್ತೆಗೆ ಹರಿಯುತ್ತಿದೆ. ಪಕ್ಕದ ಗಿರಿದರ್ಶಿನಿ, ಹೆಗ್ಡೆ ಬಡಾವಣೆಗಳಿಂದಲೂ ಯುಜಿಡಿ ನೀರು ಹರಿದು ಬರುತ್ತಿದ್ದು,  ಕೊಳಚೆ ನೀರಿನ ದುರ್ವಾಸನೆಯಿಂದ ಸ್ಥಳೀಯರು ಬೇಸತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.mysore- police- Sewage water-road

ಅದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸುವಂತೆ ಮನವಿ ಸ್ಥಳೀಯರು ಮನವಿ ಮಾಡಿದ್ದಾರೆ. ಹೀಗಾಗಿ ಸಮಾಜದ ಸಮಸ್ಯೆ ಬಗೆಹರಿಸುವ ಪೊಲೀಸರಿಗೆ  ಮೂಲಭೂತ ಸೌಕರ್ಯ ಮರೀಚಿಕೆಯಾಯ್ತೆ ಎಂಬ ಪ್ರಶ್ನೆ ಉದ್ಬವಿಸಿದೆ.

Key words: mysore- police- Sewage water-road