Sunday, September 20, 2026

BDA Apartments

ರಾಜ್ಯೋತ್ಸವಕ್ಕೆ ಯುವ ರಾಜಕುಮಾರ್ ಚೊಚ್ಚಲ ಚಿತ್ರದ ವೀಡಿಯೋ ಲಾಂಚ್ BDA JK_Adv BDA Adv
Home Cinema ರಾಜ್ಯೋತ್ಸವಕ್ಕೆ ಯುವ ರಾಜಕುಮಾರ್ ಚೊಚ್ಚಲ ಚಿತ್ರದ ವೀಡಿಯೋ ಲಾಂಚ್

ರಾಜ್ಯೋತ್ಸವಕ್ಕೆ ಯುವ ರಾಜಕುಮಾರ್ ಚೊಚ್ಚಲ ಚಿತ್ರದ ವೀಡಿಯೋ ಲಾಂಚ್

ಬೆಂಗಳೂರು, ಅಕ್ಟೋಬರ್ 24, 2020 (www.justkannada.in): ಡಾ.ರಾಜ್ ಮೊಮ್ಮಗ ಯುವರಾಜಕುಮಾರ್ ಅಭಿನಯಿಸುತ್ತಿರುವ ಯುವ 01 ಸಿನಿಮಾದ ವಿಡಿಯೋ ಬಿಡುಗಡೆಗೆ ಚಿತ್ರ ತಂಡ ಸಿದ್ಧತೆ ನಡೆಸಿದೆ.

ರಾಜ್ಯೋತ್ಸವದಂದು ಯುವರಾಜಕುಮಾರ್ ನಟನೆಯ ಚೊಚ್ಚಲ ಚಿತ್ರದ ವೀಡಿಯೋ ಲಾಂಚ್ ಆಗಲಿದೆ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ಇದರಲ್ಲಿ ಯುವರಾಜ್ ರಗಡ್ ಲುಕ್ ಎಲ್ಲರಿಗೂ ಇಷ್ಟವಾಗಿತ್ತು. ಈ ಸಿನಿಮಾಗಾಗಿ ಯುವರಾಜ್ ಸಾಕಷ್ಟು ವರ್ಕೌಟ್ ಮಾಡಿ ರೆಡಿಯಾಗಿದ್ದಾರೆ. ಇದೀಗ ಮೇಕಿಂಗ್ ವಿಡಿಯೋ ಒಂದನ್ನು ಲಾಂಚ್ ಮಾಡಲಾಗುತ್ತಿದೆ. ಇದರಲ್ಲಿ ಚಿತ್ರಕ್ಕಾಗಿ ಅವರು ಪಟ್ಟ ಶ್ರಮವೆಷ್ಟು ಎಂಬುದು ಅನಾವರಣಗೊಳ್ಳಲಿದೆ.