Thursday, August 6, 2026

BDA Apartments

Home Cinema ಸೂರ್ಯ ನಟನೆಯ ‘ಸೂರಾರೈ ಪೊಟ್ರು’ ಸಿನಿಮಾ ಬಿಡುಗಡೆಗೆ ಬೇಕಿದೆ ವಾಯುಪಡೆ ಅನುಮತಿ

ಸೂರ್ಯ ನಟನೆಯ ‘ಸೂರಾರೈ ಪೊಟ್ರು’ ಸಿನಿಮಾ ಬಿಡುಗಡೆಗೆ ಬೇಕಿದೆ ವಾಯುಪಡೆ ಅನುಮತಿ

ಚೆನ್ನೈ, ಅಕ್ಟೋಬರ್ 24, 2020 (www.justkannada.in): ನಟ ಸೂರ್ಯ ಅಭಿನಯದ ‘ಸೂರಾರೈ ಪೊಟ್ರು’ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದ್ದು. ಇದಕ್ಕೆ ಅಡ್ಡಿ ಆತಂಕವೊಂದು ಎದುರಾಗಿದೆ.

ಸುಧಾ ಕೊಂಗರಾ ನಿರ್ದೇಶನದ ‘ಸೂರಾರೈ ಪೊಟ್ರು’ ಚಿತ್ರ ಅಕ್ಟೋಬರ್ 30ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ. ಆದರೆ ಈ ಸಿನಿಮಾ ಬಿಡುಗಡೆಗೆ ಸಮಸ್ಯೆಯೊಂದು ಎದುರಾಗಿದೆ.

ಈ ಚಿತ್ರದಲ್ಲಿ ಭಾರತೀಯ ವಾಯುಪಡೆಯ ಬಗ್ಗೆ ಚಿತ್ರಸಲಾಗಿದ್ದು, ಇದರ ತುಣುಕನ್ನು ಬಿಡುಗಡೆ ಮಾಡಲು ಭಾರತೀಯ ವಾಯುಪಡೆಯ ಅನುಮತಿ ಪಡೆಯಬೇಕು. ಆದಕಾರಣ ಅ.25ರೊಳಗೆ ಅನುಮತಿ ಸಿಕ್ಕರೆ ಅಕ್ಟೋಬರ್ 30ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ನಟ ಸೂರ್ಯ ಅಭಿನಯದ ‘ಸೂರಾರೈ ಪೊಟ್ರು’ ಚಿತ್ರದಲ್ಲಿ ಕಾಣಿಸಿಕೊಂಡ ಮೂರು ಹಾಡುಗಳು ಮತ್ತು 2ನೇ ಟ್ರೈಲರ್ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ.