ಸ್ಯಾಂಡಲ್’ವುಡ್’ಗೆ ಉಪ್ಪಿ-ಪ್ರಿಯಾಂಕ ಪುತ್ರ ಎಂಟ್ರಿ !

ಬೆಂಗಳೂರು, ಜೂನ್ 26, 2019 (www.justkannada.in): ತಾರಾ ಜೋಡಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಪುತ್ರ ಅಧಿಕೃತವಾಗಿ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ.

ಪ್ರಿಯಾಂಕ ಅಭಿನಯದ ದೇವಕಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದಲ್ಲಿ ಉಪೇಂದ್ರ ಪುತ್ರಿ ಐಶ್ವರ್ಯ ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ಬಾಲ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಮ್ಮಿ ಚಿತ್ರದ ಬಳಿಕ ಎರಡನೇ ಬಾರಿಗೆ ನಿರ್ದೇಶಕ ಲೋಹಿತ್ ಹಾಗೂ ಪ್ರಿಯಾಂಕ ಒಂದಾಗಿದ್ದಾರೆ. ಚಿತ್ರದಲ್ಲಿ ಮಕ್ಕಳ ಕಳ್ಳಸಾಗಣೆ ಕುರಿತ ಸ್ಟ್ರಾಂಗ್ ಸ್ಟೋರಿ ಇದೆ.