ಸಿದ್ದರಬೆಟ್ಟದಲ್ಲಿ ವಾಮಚಾರ ನಡೆಸುತ್ತಿದ್ದ 6 ಜನರ ಬಂಧನ: ಇಬ್ಬರು ಪರಾರಿ

ಬೆಂಗಳೂರು:ಜೂ-26:(www.justkannada.in) ಸಿದ್ದರಬೆಟ್ಟದಲ್ಲಿ ವಾಮಚಾರ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದ 6 ಜನರನ್ನು ನಾಗಮಂಗಲ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ನಿಧಿ ಆಸೆಗಾಗಿ ಸೋಮವಾರ ಮಧ್ಯರಾತ್ರಿ ನೆಲಮಂಗಲ ತಾಲೂಕಿನ ರಾಯರಪಾಳ್ಯದ ಸಿದ್ದರಬೆಟ್ಟದಲ್ಲಿ ವಾಮಚಾರ ಮಾಡುತ್ತಿದ್ದರು. ಮಾಹಿತಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸಲ್ಮಾನ್ ಪಾಷಾ, ಫರೀದ್ ಖಾನ್, ಸಮೀ ಉಲ್ಲಾ, ಮಹಮ್ಮದ್ ಆಸೀಫ್, ಗುಲ್ಜರ್ ಖಾನ್ ಹಾಗೂ ಗುರುರಾಜ್ ಬಂಧಿತ ಆರೋಪಿಗಳು. ಅಯೂಬ್ ಮತ್ತು ಯಾಸೀನ್ ಎಂಬುವವರು ತಲೆಮರೆಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳ ಕಾರು, ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಬಸ್​​ ಪೇಟೆ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ದರಬೆಟ್ಟದಲ್ಲಿ ವಾಮಚಾರ ನಡೆಸುತ್ತಿದ್ದ 6 ಜನರ ಬಂಧನ: ಇಬ್ಬರು ಪರಾರಿ

6 people,Arrested, sorcery, siddarabetta