Thursday, August 13, 2026

BDA Apartments

Home Front Page ಸಿಎಂ ತಮ್ಮ ಮನೆಯಿಂದಲೇ SIR ಅಕ್ರಮ ಆರಂಭಿಸಿದ್ದಾರೆ.- ಕೇಂದ್ರ ಸಚಿವ ಹೆಚ್ ಡಿಕೆ ಗಂಭೀರ ಆರೋಪ

ಸಿಎಂ ತಮ್ಮ ಮನೆಯಿಂದಲೇ SIR ಅಕ್ರಮ ಆರಂಭಿಸಿದ್ದಾರೆ.- ಕೇಂದ್ರ ಸಚಿವ ಹೆಚ್ ಡಿಕೆ ಗಂಭೀರ ಆರೋಪ

ಬೆಂಗಳೂರು,ಜುಲೈ,3,2026 (www.justkannada.in):  ಸಿಎಂ ಡಿಕೆ ಶಿವಕುಮಾರ್ ತಮ್ಮ ಮನೆಯಿಂದಲೇ ಎಸ್ ಐಆರ್ ಅಕ್ರಮ ಆರಂಭಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ರಾಮನಗರದಲ್ಲಿ ಮಾತ್ರವಲ್ಲ ರಾಜ್ಯದಲ್ಲಿ ಎಸ್ ಐಆರ್ ಅಕ್ರಮ ನಡೆಯುತ್ತಿದೆ. ಸಿಎಂ ತಮ್ಮ ಮನೆಯಿಂದಲೇ ಎಸ್ ಐಆರ್ ಅಕ್ರಮ ಆರಂಭಿಸಿದ್ದಾರೆ.  ಕಾಂಗ್ರೆಸ್ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ರಾಜ್ಯಕಾಂಗ್ರೆಸ್ ಸರ್ಕಾರ ಲಜ್ಜೆಗೆಟ್ಟ ಸರ್ಕಾರ ರಾಹುಲ್ ಗಾಂಧಿ ದೊಡ್ಡ ಬಾಷಣ ಮಾಡುತ್ತಾರೆ ಇಲ್ಲಿಗೆ ಬಂದು ನೋಡಲಿ  ಇಲ್ಲಿರುವವರು ಭಂಡರು  ಎಂದು ಹೆಚ್ ಡಿಕೆ ವಾಗ್ದಾಳಿ ನಡೆಸಿದ್ದಾರೆ.

Key words: CM, started, SIR, illegality, Union Minister, HDK