Friday, October 2, 2026

BDA Apartments

Home Crime 1.20 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾ ಬಲೆಗೆ ಬಿದ್ದ ಸರ್ವೆಯರ್

1.20 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾ ಬಲೆಗೆ ಬಿದ್ದ ಸರ್ವೆಯರ್

ಮೈಸೂರು,ಜುಲೈ3,2026 (www.justkannada.in): ಜಮೀನು ಪೋಡಿ ಹಾಗೂ ದುರಸ್ಥಿ ಮಾಡಲು1.20 ಲಕ್ಷ ರೂ ಲಂಚ ಪಡೆಯುತ್ತಿದ್ದ ಸರ್ವೆಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ನಂಜನಗೂಡು ತಾಲೂಕು ಚಿಕ್ಕಯ್ಯನಛತ್ರ ಹೋಬಳಿ ಕೇಂದ್ರದ  ಜಯಪ್ರಕಾಶ್ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಸರ್ವೆಯರ್. ಕಡಕೊಳದ ನಾರಾಯಣ ಎಂಬುವರಿಗೆ ಸೇರಿದ 9 ಗುಂಟೆ ಜಮೀನು ಪೋಡಿ, ದುರಸ್ಥಿ ಮಾಡಲು 2 ಲಕ್ಷಕ್ಕೆ ಡೀಲ್ ಆಗಿತ್ತು. ಮುಂಗಡವಾಗಿ ನಾರಾಯಣ 80 ಸಾವಿರ ನೀಡಿದ್ದರು.1.20 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾ ಬಲೆಗೆ ಬಿದ್ದ ಸರ್ವೆಯರ್ lokayukta

ಉಳಿದ 1.20 ಲಕ್ಷ ಹಣಕ್ಕೆ ಜಯಪ್ರಕಾಶ್ ಡಿಮ್ಯಾಂಡ್ ಮಾಡಿದ್ದರು.ಮಅಧಿಕಾರಿಯ ವರ್ತನೆಗೆ ಬೇಸತ್ತಿದ್ದ ನಾರಾಯಣ್ ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದರು.ಮಮೈಸೂರಿನ ಮೈಲಾರಿ ಹೋಟೆಲ್ ನಲ್ಲಿ ಲಂಚದ ಹಣ ಪಡೆಯುವ ವೇಳೆ ದಾಳಿ ನಡೆಸಿದ ಪೊಲೀಸರು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.,ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ರವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ನಂಜನಗೂಡು ತಾಲೂಕು ಕಚೇರಿಯಲ್ಲಿ ಆರೋಪಿಯನ್ನ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.1.20 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾ ಬಲೆಗೆ ಬಿದ್ದ ಸರ್ವೆಯರ್ jk02_new jk02 new

Key words: Surveyor, Lokayukta, trap, bribe, Mysore