ಕೊಡವ ಸಾಹಿತ್ಯ ಅಕಾಡಮಿಗೆ ಬೆಳ್ಳಿ ಹಬ್ಬದ ಸಂಭ್ರಮ: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಕೊಡವರು….

ಕೊಡಗು,ಜೂ,8,2019(www.justkannada.in): ಕೊಡವ ಸಾಹಿತ್ಯ ಅಕಾಡಮಿಗೆ ಬೆಳ್ಳಿ ಹಬ್ಬದ ಸಂಭ್ರಮವಾಗಿದ್ದು, ಹೀಗಾಗಿ  ಕೊಡವರು ಸಾಂಪ್ರದಾಯಿಕ ಉಡುಗೆಯುಟ್ಟು ಸಂಭ್ರಮಾಚರಣೆ ಮಾಡಿದರು.

ಭಾರತದ ಸ್ಕಾಟ್‍ಲ್ಯಾಂಡ್ ಎಂದೇ ಪ್ರಖ್ಯಾತವಾದ ಕೊಡಗಿನ ನಿವಾಸಿಗಳಲ್ಲಿ ಜನಾಂಗವಾದ ಕೊಡವರ ಸಂಸ್ಕೃತಿ ಮತ್ತು ಉಡುಪುಗಳೂ ಅಷ್ಟೇ ಪ್ರಸಿದ್ಧ. ಅದರಂತೆ ಇಂದು ಕೊಡಗು ಸಂಸ್ಕೃತಿ ಗೋಣಿಕೊಪ್ಪದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ವೇದಿಕೆಯಲ್ಲಿ ಮೇಳೈಸಿತು.

ಸ್ವಾಭಿಮಾನಿ ಕೊಡವರ ಕಲೆ ಸಾಹಿತ್ಯ ಸಂಸ್ಕೃತಿಗಳ ಉಳಿವಿಗಾಗಿ ಸ್ಥಾಪನೆಯಾಗಿರುವ  ಕೊಡವ ಸಾಹಿತ್ಯ ಅಕಾಡಮಿಗೆ ಬೆಳ್ಳಿಹಬ್ಬದ ಸಂಭ್ರಮ ಹಿನ್ನೆಲೆ  ಗೋಣಿಕೊಪ್ಪದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ವೇದಿಕೆಯಲ್ಲಿ ಬೆಳ್ಳಿ ಹಬ್ಬ ಆಚರಿಸಲಾಯಿತು. ಈ ವೇಳೆ ಕೊಡವ ಮಹಿಳೆಯರು ಮತ್ತು ಪುರುಷರು ವಿಶೇಷ ನೃತ್ಯ ಮಾಡಿ ಗಮನ ಸೆಳೆದರು.  ಕೊಡವ ಸಂಸ್ಕೃತಿ ಬಿಂಬಿಸುವ ಉಡುಗೆ ತೊಡುಗೆ ತೊಟ್ಟು ಸಂಭ್ರಮಿಸಿದ್ದು ಎಲ್ಲರ ಕಣ್ಣು ಕುಕ್ಕಿಸುವಂತಿತ್ತು.

ಅಲ್ಲಿ ನೆರೆದಿದ್ದ ಕೊಡವರು ಬೋಳ್ಕಾಟ್ , ಉಮ್ಮತ್ತಾಟ್ , ಉರುಟ್ಟಿಕೊಟ್ಟಾಟ್ , ಕತ್ತಿಯಾಟ್ ನೃತ್ಯಗಳ ಪ್ರದರ್ಶನ ಮಾಡುವ ಮೂಲಕ   ಬೆಳ್ಳಿ ಹಬ್ಬದಲ್ಲಿ ಕೊಡಗು ಕಲೆ ಸಾಹಿತ್ಯ ಮತ್ತು ಸಂಸ್ಕೃತಿಗಳ ಅನಾವರಣ ಮಾಡಿದರು.

Key words: The silver festival is celebrated at Kodava Sahitya Akademi.  Kodavas shone in traditional dress.

#silverfestival #celebrated   #KodavaSahityaAkademi.