Sunday, October 18, 2026

Dasara Wishes

Happy Dasara
Home Front Page ಪ್ರಧಾನಮಂತ್ರಿಗಳ ಬಗ್ಗೆ ಮಾತಾಡುವ ಕಾಂಗ್ರೆಸ್ಸಿಗರೇ ಮೊದಲು ನಿಮ್ಮದು ನೀವು ನೋಡಿಕೊಳ್ಳಿ-ಸಂಸದ ರಮೇಶ್ ಜಿಗಜಿಣಗಿ ವಾಗ್ದಾಳಿ…

ಪ್ರಧಾನಮಂತ್ರಿಗಳ ಬಗ್ಗೆ ಮಾತಾಡುವ ಕಾಂಗ್ರೆಸ್ಸಿಗರೇ ಮೊದಲು ನಿಮ್ಮದು ನೀವು ನೋಡಿಕೊಳ್ಳಿ-ಸಂಸದ ರಮೇಶ್ ಜಿಗಜಿಣಗಿ ವಾಗ್ದಾಳಿ…

ವಿಜಯಪುರ,ನ,13,2019(www.justkannada.in):  ಪ್ರಧಾನಿ ನರೇಂದ್ರ ಮೋದಿ  ಬಗ್ಗೆ ಮಾತಾಡುವ ಕಾಂಗ್ರೆಸ್ಸಿಗರೇ ಮೊದಲು ನಿಮ್ಮದು ನೀವು ನೋಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಸಂಸದ ರಮೇಶ್ ಜಿಗಜಿಣಗಿ ವಾಗ್ದಾಳಿ ನಡೆಸಿದರು.

ವಿಜಯಪುರದಲ್ಲಿ ಇಂದು ಮಾತನಾಡಿದ ಸಂಸದ ರಮೇಶ್ ಜಿಗಜಿಣಗಿ, ಪ್ರಧಾನಮಂತ್ರಿಗಳು ಯಾರಿಗೂ ನಾಮ‌ ಹಾಕಿಲ್ಲ. ನೀವು ದಡ್ಡರು, ನೀವು ನಾಮ ಹಾಕಿಕೊಂಡಿದ್ದೀರಿ, ಪ್ರಧಾನಿಗೆ ನಾಮ ಹಾಕುವ ಧೈರ್ಯ ಇದೆಯೇ ನಿಮಗೆ ಎಂದು ಕಾಂಗ್ರೆಸ್ ವಿರುದ್ದ ಹರಿಹಾಯ್ದರು.

ಅನರ್ಹ ಶಾಸಕರ ಬಗ್ಗೆ ಸುಪ್ರೀಂ ತೀರ್ಪು  ಕುರಿತು ಪ್ರತಿಕ್ರಿಯಿಸಿದ ರಮೇಶ್ ಜಿಗಜಿಣಗಿ, ಅನರ್ಹರ ತೀರ್ಪು ಬಗ್ಗೆ ತೀರ್ಮಾನ ಪಕ್ಷ ಮಾಡುತ್ತದೆ. ಟಿಕೆಟ್ ಗೊಂದಲ ಎಲ್ಲಾ ಕಡೆಯೂ ಇರುತ್ತೆ ಎಂದರು.

ಇದೇ ವೇಳೆ ಸಿದ್ಧರಾಮಯ್ಯಗೆ ಲೇವಡಿ ಮಾಡಿದ ರಮೇಶ್ ಜಿಗಜಿಣಗಿ, ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸಿಎಂ ಆಗೋದು ಮರೆತು ಬಿಡಬೇಕು. ಅವರು ಅಹಿಂದ ನಾಯಕ ಎಂದು ಎಲ್ಲರೂ ಅವಕಾಶ ನೀಡಿದ್ರು. ಆದ್ರೆ ಇದೀಗ ಆ ಭಾವನೆ ಅವರ ಪಕ್ಷದಲ್ಲೇ ಉಳಿದಿಲ್ಲ ಆನೆ ಹೋಗುತ್ತೆ, ಹಿಂದೆ ಶ್ವಾನ ಬೆನ್ನು ಹತ್ತುತ್ತೆ. ಹಾಗೆಯೇ ಈಗ ಬೀಳುತ್ತೆ ಆಗ ಬೀಳುತ್ತೆ ಅಂತ ಕಾಯ್ತಿತ್ತಂತೆ ಹಾಗಾಗಿದೆ ಕಾಂಗ್ರೆಸ್ ಸ್ಥಿತಿ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜತೆ ಅಸಮಾಧಾನ ಕುರಿತು ಮಾತನಾಡಿದ ರಮೇಶ್ ಜಿಗಜಿಣಗಿ, ಯತ್ನಾಳ್ ಮಂತ್ರಿ ಆದ್ರೆ ನಾನೇನು ಉಪವಾಸ ಇರ್ತೀವಾ? ಶಾಸಕ ಯತ್ನಾಳ್ ಮಂತ್ರಿ ಆದ್ರೆ ನಮ್ಮ ಜಿಲ್ಲೆಯವರು ಮಂತ್ರಿ ಆಗ್ತಾರೆ ಎಂಬ ಖುಷಿ ನಮಗೂ ಇದೆ. ಅದೆಲ್ಲಾ ನೀವು ತಲೆಯಲ್ಲಿ ಇಟ್ಕೋಬೇಡಿ, ಯತ್ನಾಳಂದು ನಂದು ಜಗಳಾ ತಲೇಲಿ ಇಟ್ಕೋಬೇಡಿ ಎಂದರು.

Key words: congress -talks – prime ministers-MP-Ramesh Jigajinagi