ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಮತ್ತೊಂದು ಪೆಲಿಕಾನ್ ಪಕ್ಷಿ ಸಾವು…

ಮೈಸೂರು,ಅ,29,2019(www.justkannada.in): ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಇದೀಗ ಮತ್ತೊಂದು ಪೆಲಿಕಾನ್ ಪಕ್ಷಿ ಸಾವನ್ನಪ್ಪಿದೆ.

ಅಕ್ಟೋಬರ್ 26ರಂದು ಒಂದು ಸ್ಪಾಟ್ ಬಿಲ್ ಪೆಲಿಕಾನ್ ಸಾವನ್ನಪ್ಪಿತ್ತು. ಇದೀಗ ನಿನ್ನೆ ಸಂಜೆ ಮತ್ತೊಂದು ಹೆಜ್ವಾರ್ಲೆ ಹೆಸರಿನ ಪೆಲಿಕಾನ್ ಪಕ್ಷಿ ಸಾವನ್ನಪ್ಪಿದೆ. ಎರಡು ದಿನಗಳ ಅಂತರದಲ್ಲಿ ಎರಡನೇ ಪೆಲಿಕಾನ್ ಮೃತಪಟ್ಟಿದ್ದು ಪೆಲಿಕಾನ್ ಸಾವಿಗೆ ಅಧಿಕಾರಿಗಳು ಮೂರು ಕಾರಣಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಹಕ್ಕಿಜ್ವರ, ಕಲುಷಿತ ನೀರು, ಸೊಂಕಿನಿಂದಾಗಿ ಸಾವನ್ನಪ್ಪಿರಬಹುದು  ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ವಿದೇಶಿ ಹಕ್ಕಿಗಳು ವಲಸೆ ಬರುವ ಸಮಯದಲ್ಲೇ ಪೆಲಿಕಾನ್ ಪಕ್ಷಿಗಳು ಸಾವನ್ನಪ್ಪುತ್ತಿದ್ದು ಕುಕ್ಕರಹಳ್ಳಿ ಕೆರೆಯಲ್ಲಿ  ಆತಂಕ ಹೆಚ್ಚಾಗಿದೆ. ಇನ್ನು ಪೆಲಿಕಾನ್ ಕಳೇಬರವನ್ನ ಬೆಂಗಳೂರು ಲ್ಯಾಬ್ ಗೆ ರವಾನೆ ಮಾಡಲಾಗಿದ್ದು ಲ್ಯಾಬ್ ವರದಿ ಬಂದ ನಂತರ ಪೆಲಿಕಾನ್ ಸಾವಿಗೆ ನಿಖರ ಕಾರಣ ಬಹಿರಂಗವಾಗಲಿದೆ.

ಕಳೆದ 2017ರಲ್ಲಿ ಹಕ್ಕಿಜ್ವರದಿಂದಾಗಿ ಚಾಮರಾಜೇಂದ್ರ ಮೃಗಾಲಯ ಬಂದ್ ಆಗಿತ್ತು. 1 ತಿಂಗಳ ಕಾಲ ಮೃಗಾಲಯ ಬಂದ್ ಮಾಡಿ ಹಕ್ಕಿಜ್ವರವನ್ನು ನಿವಾರಣೆ ಮಾಡಲಾಗಿತ್ತು. ಇದೀಗ ಮತ್ತೆ ಕ್ಕಿಜ್ವರದ ಆತಂಕ ಎದುರಾಗಿದೆ.

ಈಗ ಆತಂಕ ಪಡುವ ಅವಶ್ಯಕತೆ ಇಲ್ಲ-ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ

ಈ ಬಗ್ಗೆ ಮಾತನಾಡಿರುವ ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ, ಈಗಾಗಲೇ ಪಕ್ಷಿ ಮೃತದೇಹವನ್ನ ಲ್ಯಾಬ್ ಗೆ ಕಳಿಸಲಾಗಿದೆ. ಹಕ್ಕಿ ಜ್ವರದಿಂದ ಮೃತಪಟ್ಟಿದೆ ಎಂದು ಈಗಾಲೇ ಹೇಳಲು ಸಾಧ್ಯವಿಲ್ಲ. ರಿಪೋರ್ಟ್ ಬಂದ ನಂತರ ಗೊತ್ತಾಗುತ್ತದೆ. ಈಗಾಗಲೇ ಮೃಗಾಲಯದಲ್ಲೂ ಸಹ ಎಚ್ಚರ ವಹಿಸಲಾಗಿದೆ. ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಈಗ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.

 

Key words: Another -pelican bird- dies –mysore- Kukkarahalli Lake