ಉಡುಪಿ ಜಿಲ್ಲೆಯಲ್ಲಿ ಯಾವುದೇ ಟೊಮ್ಯಾಟೋ ಜ್ವರ ಕಂಡು ಬಂದಿಲ್ಲ- ಡಿಹೆಚ್.ಓ ನಾಗಭೂಷಣ್ ಉಡುಪ ಸ್ಪಷ್ಟನೆ.

ಉಡುಪಿ,ಮೇ,16,2022(www.jkustkannada.in): ಕರೋನಾ ,ಡೆಲ್ಟಾ ವೈರಸ್ ಬಳಿಕ ಇದೀಗ ಟೊಮ್ಯಾಟೋ ಜ್ವರದ ಭೀತಿ ಎದುರಾಗಿದ್ದು ಕೇರಳಾದಲ್ಲಿ ಮಕ್ಕಳಲ್ಲಿ ಈ ಜ್ವರ  ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ , ಮೈಸೂರು ಗಡಿ ಭಾಗಗಳಲ್ಲಿ ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು ಈ ಮಧ್ಯೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ಟೊಮ್ಯಾಟೋ ಜ್ವರ ಕಂಡು ಬಂದಿಲ್ಲ ಎಂದು ಅಲ್ಲಿನ ಡಿಹೆಚ್.ಓ ನಾಗಭೂಷಣ್ ಉಡುಪ ಸ್ಪಷ್ಟನೆ ನೀಡಿದ್ದಾರೆ.

ಆರೋಗ್ಯ ಇಲಾಖೆ  ಸೂಚನೆಯಂತೆ ಜಿಲ್ಲೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕೇರಳಾದಿಂದ ಬರುತ್ತಿರುವವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಗಡಿಯಲ್ಲಿ ಸಂಪೂರ್ಣ ತಪಾಸಣೆ  ಮಾಡಲಾಗುತ್ತಿದೆ ಎಂದು ನಾಗಭೂಷಣ ಉಡುಪ ತಿಳಿಸಿದ್ದಾರೆ.

Key words: No tomato- fever – found -Udupi -district-DHO