Saturday, September 5, 2026

BDA Apartments

Home Front Page ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ: ಡಿಸಿಎಂ ಸ್ಥಾನ ಕೊಟ್ರೂ ನಿಭಾಯಿಸಲು ಸಿದ್ದ-ಯು.ಟಿ ಖಾದರ್

ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ: ಡಿಸಿಎಂ ಸ್ಥಾನ ಕೊಟ್ರೂ ನಿಭಾಯಿಸಲು ಸಿದ್ದ-ಯು.ಟಿ ಖಾದರ್

ಬೆಂಗಳೂರು,ಜೂನ್,3,2026 (www.justkannada.in):  ಇಂದು ಡಿಕೆ ಶಿವಕುಮಾರ್‍ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದು  ಸ್ಪೀಕರ್ ಆಗಿದ್ದ ಯುಟಿ ಖಾದರ್ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತವಾಗಿದೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಯು.ಟಿ ಖಾದರ್,  ಸಚಿವ ಸ್ಥಾನ ನೀಡುವ ಬಗ್ಗೆ ನನಗೆ ಇನ್ನೂ ಅಧಿಕೃತ ಕರೆ ಬಂದಿಲ್ಲ. ನಾನು ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ. ಆರೋಗ್ಯ ಖಾತೆ ವಸತಿ ಖಾತೆಯನ್ನ ಬಯಸುತ್ತೇನೆ ಎಂದಿದ್ದಾರೆ.

ನಾನು ಡಿಸಿಎಂ ಸ್ಥಾನದ ಆಕಾಂಕ್ಷಿ  ಅಲ್ಲ ನಾಯಕರು ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಡಿಸಿಎಂ ಸ್ಥಾನ ಕೊಟ್ಟರೂ ನಿಭಾಯಿಸಲು ಸಿದ್ದ ಎಂದು ಯುಟಿ ಖಾದರ್ ತಿಳಿಸಿದ್ದಾರೆ.

Key words: No demand, Ready, DCM, Minister post, U.T. Khader