ಮೈಸೂರು, ಅಕ್ಟೋಬರ್,21,2026 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ಬನ್ನಿಮಂಟಪದತ್ತ ಸಾಗುತ್ತಿದ್ದು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಾವಿರಾರು ಜನರು ಮೆರವಣಿಗೆಯನ್ನ ನೋಡಿ ಕಣ್ತುಂಬಿಕೊಂಡರು.
ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಕ್ಯಾಪ್ಟನ್ ಪ್ರಶಾಂತ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದು ಪ್ರಶಾಂತಗೆ ಕುಮ್ಕಿ ಆನೆಗಳಾದ ರೂಪ, ಕಾವೇರಿ ಸಾಥ್ ನೀಡಿದ್ದಾರೆ. ಜಂಬೂಸವಾರಿ ಸುಭಾಷ್ ಚಂದ್ರ ಬೋಷ್ ವೃತ್ತ ತಲುಪಿದ್ದು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಣೆ ಮಾಡುತ್ತಿದ್ದಾರೆ.
ಸಂಜೆ 4.28ರ ಶುಭ ಮೀನ ಲಗ್ನದಲ್ಲಿ ಸಿಎಂ ಡಿಕೆ ಶಿವಕುಮಾರ್ ಜಂಬೂಸವಾರಿ ಮೆರವಣಿಗೆಗೆ ಚಾಲನೆ ಕೊಟ್ಟರು. ಬಳಿಕ ಅರಮನೆಯಿಂದ ಜಯಚಾಮರಾಜೇಂದ್ರ ವೃತ್ತ, ಕೆಆರ್ ಸರ್ಕಲ್ ಆಯುರ್ವೇದ ವೃತ್ತದ ಮೂಲಕ ಜಂಬೂಸವಾರಿ ಮೆರವಣಿಗೆ ಸುಮಾರು 5 ಕಿ.ಮೀಟರ್ ದೂರ ಸಾಗುತ್ತಿದ್ದು ಬನ್ನಿಮಂಟಪದಲ್ಲಿ ಕೊನೆಗೊಳ್ಳಲಿದೆ,







