Monday, August 10, 2026

BDA Apartments

Home Crime ಸರಣಿ ಅಪಘಾತದಲ್ಲಿ ಇಬ್ಬರು ಸಾವು: ಕಾಡಸಿದ್ದೇಶ್ವರ ಸ್ವಾಮೀಜಿ ಸೇರಿ ಇಬ್ಬರಿಗೆ ಗಾಯ.

ಸರಣಿ ಅಪಘಾತದಲ್ಲಿ ಇಬ್ಬರು ಸಾವು: ಕಾಡಸಿದ್ದೇಶ್ವರ ಸ್ವಾಮೀಜಿ ಸೇರಿ ಇಬ್ಬರಿಗೆ ಗಾಯ.

ಬೆಳಗಾವಿ,ಜೂನ್,17,2023(www.justkannada.in): ಎರಡು ಲಾರಿ, ಕಾರು ಮಧ್ಯೆ ಭೀಕರ ಸರಣಿ  ಅಪಘಾತ  ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಕಾಕತಿ ಬಳಿಯ ರಾಷ್ಟ್ರೀಯ ಹೆದ್ದಾರಿ  4ರಲ್ಲಿ ನಡೆದಿದೆ. ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದರೇ  ಶಿವಾಪೂರ ಗ್ರಾಮದ ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿ ಸೇರಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕಾಗಮಿಸಿದ ಕಾಕತಿ ಪೊಲೀಸರು ಗಾಯಾಳುಗಳನ್ನ ಖಾಸಗಿ ಆಸ್ಪತ್ರೆಗೆ ಶಿಫ್ಟ್​ ಮಾಡಿದ್ದಾರೆ.

ಮುಂದೆ ತೆರಳುತ್ತಿದ್ದ ಲಾರಿ ಬ್ರೇಕ್ ಹಾಕಿದೆ. ಈ ವೇಳೆ ಹಿಂದೆ ಬರುತ್ತಿದ್ದ ಅಲ್ಟೋ ಕಾರು ಲಾರಿಗೆ ಡಿಕ್ಕಿಯಾಗಿದೆ. ಈ ಸಮಯದಲ್ಲಿ ಅಲ್ಟೋ ಕಾರಿಗೆ ಹಿಂದಿನಿಂದ ಮತ್ತೊಂದು ಲಾರಿ ಡಿಕ್ಕಿಯಾಗಿದ್ದು ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

Key words: Two death-serial accident-belagavi- Kadsiddeswara Swamiji – injured