Friday, September 25, 2026

BDA Apartments

Home Front Page ಕಾಂಗ್ರೆಸ್ ಸರ್ಕಾರ ಬರಲು ತಮ್ಮ ಕೊಡುಗೆ ಅಪಾರ- ಬಿ.ಎಲ್ ಸಂತೋಷ್ ಕಾಲೆಳೆದ ಸಚಿವ ಎಂ.ಬಿ ಪಾಟೀಲ್.

ಕಾಂಗ್ರೆಸ್ ಸರ್ಕಾರ ಬರಲು ತಮ್ಮ ಕೊಡುಗೆ ಅಪಾರ- ಬಿ.ಎಲ್ ಸಂತೋಷ್ ಕಾಲೆಳೆದ ಸಚಿವ ಎಂ.ಬಿ ಪಾಟೀಲ್.

ಬೆಂಗಳೂರು,ಜೂನ್,17,2023(www.justkannada.in): ಕಾಂಗ್ರೆಸ್ ಸರ್ಕಾರ ಬರಲು ತಮ್ಮ ಕೊಡುಗೆ ಅಪಾರ ಎನ್ನುವ ಮೂಲಕ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು  ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಕಾಲೆಳೆದಿದ್ದಾರೆ.

ಇಂಧು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್,  ಬಿಎಲ್  ಸಂತೋಷ್ ಅವೇ ನಾನು  ನಿಮಗೆ ಅಭಾರಿಯಾಗಿದ್ದೇನೆ.  ಬಿಜೆಪಿಯಲ್ಲಿ ಅನೇಕ ಲಿಂಗಾಯರತನ್ನ ಮುಗಿಸಿದ್ದೀರಿ.  ಉಳಿದ  ಹಿರಿಯರ ವಿರುದ್ದ ಬೇರೆಯವರನ್ನ ಎತ್ತಿ ಕಟ್ಟಿದ್ದೀರಿ. ಬಸವರಾಜ ಬೊಮ್ಮಾಯಿ ಮುಗಿಸಲು  ಬಸನಗೌಡ ಪಾಟೀಲ್ ಯತ್ನಾಳ್  ಎತ್ತಿ ಕಟ್ಟಿದ್ದೀರಿ. ನಿಮ್ಮ ಪಟ್ಟ ಶಿಷ್ಯ ಪ್ರತಾಪ್ ಸಿಂಹ ಮೇಲೂ ಗುರಿ ಇದೆ ಎಂದು ಲೇವಡಿ ಮಾಡಿದರು.ಕಾಂಗ್ರೆಸ್ ಸರ್ಕಾರ ಬರಲು ತಮ್ಮ ಕೊಡುಗೆ ಅಪಾರ- ಬಿ.ಎಲ್ ಸಂತೋಷ್ ಕಾಲೆಳೆದ ಸಚಿವ ...

ಹಾಗೆಯೇ ಲಿಂಗಾಯತ ನಾಯಕರ  ನಂತರ  ನಿಮ್ಮ ಗುರಿ ಒಕ್ಕಲಿಗ, ದಲಿತ ನಾಯಕರಾ..? ಎಂದು ಸಚಿವ ಎಂ.ಬಿ ಪಾಟೀಲ್  ಪ್ರಶ್ನಿಸಿದ್ದಾರೆ.

Key words:  contribution -Congress government -Minister -MB Patil – BL Santhosh.