Friday, September 25, 2026

BDA Apartments

Home Front Page ರಾಜಕೀಯ ಸಾಕಾಗಿದೆ: ಸ್ಪರ್ಧೆ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ- ಸಂಸದ ಡಿ.ಕೆ ಸುರೇಶ್.

ರಾಜಕೀಯ ಸಾಕಾಗಿದೆ: ಸ್ಪರ್ಧೆ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ- ಸಂಸದ ಡಿ.ಕೆ ಸುರೇಶ್.

ಬೆಂಗಳೂರು,ಜೂನ್,17,2023(www.justkannada.in): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿರುವ ಸಂಸದ ಡಿ.ಕೆ ಸುರೇಶ್, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೇ ಬಗ್ಗೆ ಯಾವುದೇ ತೀರ್ಮಾನ  ಮಾಡಿಲ್ಲ. ಕಾರ್ಯಕರ್ತರ,  ಮುಖಂಡರ ಸಲಹೆ ಪಡೆಯಬೇಕು. ಇಂದಿನ ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ. ರಾಜಕೀಯ ಸಾಕಾಗಿದೆ. ಬೇರೆಯವರಿಗೆ ಅವಕಾಶ ನೀಡುವುದು ನನ್ನ ಉದ್ದೇಶ . ಅಧಿಕಾರದ  ದಾಹ ಇರುವವರಿಗೆ ರಾಜಕೀಯ ಬೇಕಾಗುತ್ತದೆ. ಆದರೆ ನನಗರಿವುದು ಅಭಿವೃದ್ದಿಯ ದಾಹ ಎಂದರು.ರಾಜಕೀಯ ಸಾಕಾಗಿದೆ: ಸ್ಪರ್ಧೆ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ- ಸಂಸದ ಡಿ.ಕೆ ಸ...

ಇತ್ತೀಚಿಗಷ್ಟೆ ಮಾತನಾಡಿದ್ದ ಸಂಸದ ಡಿ.ಕೆ ಸುರೇಶ್ , ನನಗೆ ರಾಜಕಾರಣ ಸಾಕೆನಿಸಿಬಿಟ್ಟಿದೆ ಎನ್ನುವ ಮೂಲಕ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುತ್ತಾರೆಯೇ ಎಂಬ ಪ್ರಶ್ನೆ ಹುಟ್ಟು ಹಾಕಿದ್ದರು.

Key words:  politics-No decision – contest- MP -DK Suresh